
ಮಾಸ್ ಸಂಸ್ಥೆಯು ಕಳೆದ 23 ವರ್ಷಗಳಿಂದ ಅಡಿಕೆಗೆ ಪ್ರೋತ್ದಾಹ ಕೊಟ್ಟು ಖರೀದಿ ಮಾಡುತ್ತಿದೆ. ಆ ಮೂಲಕ ಬೆಳೆಗಾರರ ಹಿತ ಕಾಯುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಸವಣೂರು ಸೀತಾರಾಮ ರೈ ಹೇಳಿದರು.
ಅವರು ಸುಳ್ಯದ ಮಾಸ್ ಸಂಸ್ಥೆಯ ಅಡಿಕೆ ಸಂಸ್ಕರಣಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಳೆದ 23 ವರ್ಷಗಳಿಂದ ಸೇವೆ ನೀಡುತ್ತಿರುವ ಮಾಸ್ ಸಂಸ್ಥೆ ಸುಳ್ಯದಲ್ಲಿ ಮತ್ತೆ ಸಂಸ್ಕರಣ ಘಟಕ ತೆರೆದುಕೊಂಡಿದೆ, ರೈತರ ಸಹಕರಿಸಬೇಕು ಮತ್ತು ಮಾಸ್ ಸಂಸ್ಥೆಯನ್ನು ಬಳಸಿಕೊಳ್ಳುವುದರ ಮೂಲಕ ಉತ್ತಮ ಬೆಲೆಯ ಫಲ ಪಡೆಯುವಂತಾಗಬೇಕು ಎಂದು ಹೇಳಿದರು.
ಸಂಸ್ಕರಣಾ ಘಟಕ ಉದ್ಘಾಟಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ರೈತರ ಸಂಕಷ್ಟ ಕಾಲದಲ್ಲಿ ಮಾಸ್ ಸಂಸ್ಥೆ ಸುಳ್ಯದಲ್ಲಿ ಸಂಸ್ಕರಣ ಘಟಕ ತೆರೆಯುವುದರ ಮೂಲಕ ಉದ್ಯೋಗದ ಮಾರ್ಗ ತೋರಿಸಿದೆ, ರೈತರ ಅಭಿವೃದ್ದಿಯಲ್ಲಿ ಮಾಸ್ ಸಂಸ್ಥೆಯು ಅಭಿವೃದ್ದಿಯ ಮುನ್ನುಡಿ ಬರೆಯಲಿ ಎಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ವಹಿಸಿದ್ದರು,
ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ಎಸ್. ಎನ್. ಮನ್ಮಥರವರು ಮಾತನಾಡಿ ಮಾಸ್ ಸಂಸ್ಥೆಯಿಂದ ರೈತರಿಗೆ ದೈರ್ಯ ತುಂಬುವ ಕೆಲಸವಾಗಿದೆ, ಎಪಿಎಂಸಿ ಮಾಜಿ ಅಧ್ಯಕ್ಷ ಎನ್. ಜಯಪ್ರಕಾಶ್ ರೈ ಮಾತನಾಡಿ ರೈತ ದೇಶದ ಬೆನ್ನೆಲೆಬು ಆದರು ತಾನು ಬೆಳೆದ ಬೆಳೆಗೆ ನಿಖರ ಬೆಲೆ ಪಡೆಯುವಲ್ಲಿ ವಿಫಲವಾಗಿದ್ದಾನೆ ಎಂದರು.. ಎಪಿಎಂಸಿ ಕಾರ್ಯದರ್ಶಿ ರವೀಂದ್ರ ಮಾಸ್ ಆಡಳಿತ ನಿರ್ದೇಶಕರಾದ ಶ್ರೀರಾಮ ಪಾಟಾಜೆ, ಸುದಾ ಎಸ್ ರೈ ಪುಣ್ಚಪ್ಪಾಡಿ,ಪುಷ್ಪರಾಜ ಅಡ್ಯಂತಾಯ, ಮಂಚಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಾಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಿ ಮಹಾಬಲೇಶ್ವರ ಭಟ್ ವಂದಿಸಿದರು. ಚೀಫ್ ಮಾರ್ಕೆಟಿಂಗ್ ಆಫೀಸರ್ ಲೋಕೇಶ್ ಕೆ.ಎಂ., ಸುಳ್ಯ ಬ್ರಾಂಚ್ ಮೇನೇಜರ್ ಧನಂಜಯ ಮೇರ್ಕಜೆ ಸಹಕರಿಸಿದರು. ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.