
ಕೊಲ್ಲಮೊಗ್ರ ಪೇಟೆಯಿಂದ ಕಟ್ಟ ರಸ್ತೆ ಸಂಪರ್ಕಿಸುವಲ್ಲಿ ಸರ್ಕಲ್ ನಿರ್ಮಾಣ ಹಾಗೂ ಮೋರಿ ನಿರ್ಮಾಣ ಗಾಮಗಾರಿಗೆ ಗ್ರಾ.ಪಂ.ಮೋಹಿನಿ ಕಟ್ಟ ಗುದ್ದಲಿಪೂಜೆ ನೆರವೇರಿಸಿದರು. ಗ್ರಾಮ ಪಂಚಾಯತ್ ನ ರೂ. 10 ಲಕ್ಷ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ನೇಮಿಚಂದ್ರ ಬಳ್ಳಡ್ಕ ತೆಂಗಿನಕಾಯಿ ಒಡೆಯುವ ಮೂಲಕ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಮೋಹಿನಿ ಕಟ್ಟ, ಗ್ರಾ.ಪಂ.ಉಪಾಧ್ಯಕ್ಷ ಮಾಧವ ಚಾಂತಾಳ, ಪಿಡಿಓ ಚೆನ್ನಪ್ಪ ನಾಯ್ಕ್ , ಮಾಜಿ ಉಪಾಧ್ಯಕ್ಷ ಅಶ್ವಥ್ ಯಾಲದಾಳು, ಗ್ರಾ.ಪಂ.ಸದಸ್ಯೆ ಶುಭಲತಾ, ಕೊಚ್ಚಿಲ ಮಯೂರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಶೇಖರ ಅಂಬೆಕಲ್ಲು, ಸಹಕಾರಿ ಸಂಘದ ಮಾಜಿ ಉಪಾಧ್ಯಕ್ಷ ಮಣಿಕಂಠ ಕೊಳಗೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಗಣೇಶ ಶಿವಾಲ, ಹಿರಿಯ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ ಕೊಂದಾಳ, ಉದಯ ಶಿವಾಲ, ಹಿರಿಯರಾದ ರುಕ್ಮಯ್ಯ ಗೌಡ ದೊಡ್ಡಿಹಿತ್ಲು, ಶೇಖರ ಕೊಂದಾಳ, ನೀಲಪ್ಪ ಅಂಬೆಕಲ್ಲು, ಸುರೇಶ್ ಮಿತ್ತಮಜಲು, ಹರೀಶ್ ಪೂಜಾರಿ ಚಾಳೆಪ್ಪಾಡಿ ಹಾಗೂ ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು.