
ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಫೆ.23 ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ತಂಡ ಎಲ್ಲಾ 12 ಸ್ಥಾನ ಪಡೆದು ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ನಡೆಯಿತು. ಪಟಾಕಿ ಸಿಡಿಸಿ, ಪೇಟೆಯಲ್ಲಿ ಮೆರವಣಿಗೆ ಸಾಗಿ ಸಂಭ್ರಮಿಸಿದರು.
ಗೆಲುವು ಸಾಧಿಸಿದ ಹಾಲಿ ಅಧ್ಯಕ್ಷ ವೆಂಕಟ್ ದಂಬೆಕೋಡಿ , ಮಾಜಿ ಮುಳಿಯ ಕೇಶವ ಭಟ್ , ಜಯಪ್ರಕಾಶ್ ಮೊಗ್ರ , ನವೀನ್ ಬಾಳುಗೋಡು , ರವೀಂದ್ರ ಅಡ್ಡನಪಾರೆ , ಪದ್ಮನಾಭ ಮೀನಾಜೆ, ಕೃಷ್ಣಯ್ಯ ಮೂಲೆತೋಟ, ವಿನ್ಯಾಸ್ ಕೊಚ್ಚಿ, ತಿಲಕ ಕೊಲ್ಯ, ವಿನುತಾ ಪ್ರಶಾಂತ್ ಜಾಕೆ, ಜನಾರ್ಧನ ಅಚ್ರಪ್ಪಾಡಿ, ಕುಂಞ ಬಳ್ಳಕ, ಬಿಜೆಪಿ ಮುಖಂಡರುಗಳಾದ ವೆಂಕಟ್ ವಳಲಂಬೆ, ಬಿ.ಕೆ.ಬೆಳ್ಯಪ್ಪ ಗೌಡ, ವಿಜಯಕುಮಾರ್ ಚಾರ್ಮಾತ, ಮಾಧವ ಚಾಂತಾಳ, ಶ್ರೀಕಾಂತ್ ಮಾವಿನಕಟ್ಟೆ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.