
ರೋಟರಿ ಕ್ಲಬ್ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಯೂಥ್ ರೆಡ್ ಕ್ರಾಸ್ ಯೂನಿಟ್ ರೋವರ್ಸ್ ರೆಂಜರ್ಸ್ ಹಾಗೂ ಎನ್ ಎಸ್ ಎಸ್ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಾರ್ಡಿಯೋ ಪಲ್ಮನರಿ ಪುನರ್ಜೀವನ ಕಾರ್ಯಾಗಾರವು ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮವನ್ನು ಮಂಗಳೂರಿನ ಕೆಎಂಸಿ ಯಾ ತುರ್ತು ಚಿಕಿತ್ಸಾ ಘಟಕದ ಡಾ. ಪವನ್ ಆರ್ ಸಾಗರ್ ದೀಪ ಪ್ರಜ್ವಲದೊಂದಿಗೆ ಉದ್ಘಾಟಿಸಿ ಮಾತನಾಡುತ್ತಾ ಸಿಪಿಆರ್ ಕಾರ್ಡಿಯೋ ಪಲ್ಮನರಿ ಪುನರುಜ್ಜೀವನ ಎನ್ನುವುದು ಜೀವ ರಕ್ಷಕ ತಂತ್ರವಾಗಿದ್ದು, ಹೃದಯಾಘಾತ ಅಥವಾ ಹೃದಯಘಾತಕ್ಕೆ ಸಮೀಪವಿರುವಂತಹ ಅನೇಕ ತುರ್ತು ಸಂದರ್ಭಗಳಲ್ಲಿ ಉಪಯುಕ್ತವಾಗಿದೆ . ಸಿ ಪಿ ಆರ್ ನೀಡುವುದರಿಂದ ಹೃದಯವು ಪಂಪು ಮಾಡಲು ಪ್ರಾರಂಭಿಸುತ್ತದೆ ಮತ್ತು ರಕ್ತವು ದೇಹದಲ್ಲಿ ಹರಿಯಲು ಪ್ರಾರಂಭಿಸುತ್ತದೆ .ಇದು ಹೃದಯ ಸ್ತಂಭನ ದಿಂದ ವ್ಯಕ್ತಿಯ ಜೀವ ಉಳಿಸಬಹುದಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ ನಾಯರ್ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ, ರೋಟರಿ ಪೂರ್ವ ಸಹಾಯಕ ಗವರ್ನರ್ ಶಿವರಾಮ ಎನೇಕಲ್ ,ರೋಟರಿ ಸದಸ್ಯ ನವೀನ್ ವಾಲ್ತಾಜೆ, ಕೆ ಎಸ್ ಎಸ್ ಕಾಲೇಜಿನ ಉಪನ್ಯಾಸಕ ರಾಮಪ್ರಸಾದ್ ,ಉಪನ್ಯಾಸಕಿ ಆರತಿ ಉಪಸ್ಥಿತರಿದ್ದರು. ಕಾಲೇಜಿನ ರೋವರ್ ರೇಂಜರ್ಸ್ ,ಎನ್ ಎಸ್ ಎಸ್ ಘಟಕ ,ಹಾಗೂ ಯೂತ್ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು