
ನಗರ ಪಂಚಾಯತ್ ಶೆಡ್ಡ್ ಕಸ , ಜೀವ ನದಿ ಪಯಶ್ವಿನಿಯಲ್ಲಿ ಮೀನುಗಳು ಮಾರಣ ಹೋಮ,ಅರಮನೆಗಯ ಸೇತುವೆ , ಬಿಎಸ್ ಎನ್ ಎಲ್ ನೆಟ್ವರ್ಕ್ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಲೋಕಾಯುಕ್ತಕ್ಕೆ ದೂರು !
ಸುಳ್ಯ ತಾಲೂಕು ಕಚೇರಿಯಲ್ಲಿ ಫೆ. 12 ರಂದು ನಡೆದ ಲೋಕಾಯುಕ್ತ ಜನ ಸಂಪರ್ಕ ಸಭೆಯು ಲೋಕಾಯುಕ್ತ ಎಸ್ ಪಿ ನಟರಾಜ್ ಎಂ ಎಸ್ ನೇತ್ರತ್ವದಲ್ಲಿ ತಾಲೂಕು ಕಛೇರಿ ಸಭಾಂಗಣದಲ್ಲಿ ನಡಿಯಿತು.
ಸುಳ್ಯ ನಗರ ಪಂಚಾಯತ್ ಕಸದ ವಿಲೇವಾರಿಯಲ್ಲಿ ಅಸಮರ್ಪಕ ನಿರ್ವಹಣೆ ಕುರಿತು ನ.ಪಂ ಸದಸ್ಯ ಕೆ ಎಸ್ ಉಮ್ಮರ್
60 ರಿಂದ 70 ಲಕ್ಷ ರೂ ಕಸ ವಿಲೇವಾರಿಗೆ ಬಳಸಿದ್ದು ಅಲ್ಲದೇ ಕಲ್ಚರ್ಪೆ ಯಲ್ಲಿ ಬರ್ನಿಂಗ್ ಮೆಷಿನ್ ಬಳಿ ನಡೆಯುವ ಕೆಲಸಕ್ಕೆ ತಿಂಗಳಿಗೆ 1.25 ಲಕ್ಷ ಖರ್ಚು ಆಗುತ್ತಿದ್ದು ಇದು ಸರಕಾರಕ್ಕೆ ಭಾರಿ ನಸ್ಟವಾಗುತ್ತಿದೆ ಈ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಿದರು.
ಸುಳ್ಯ ಪಯಶ್ವಿನಿ ನದಿಯಲ್ಲಿ ಮೀನುಗಳ ಮಾರಣ ಹೋಮ ನಡೆದಿರುವ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಡಿ ಎಂ ಶಾರಿಕ್ ರವರು ದೂರು ನೀಡಿದ್ದು ಇದಕ್ಕೆ ಉತ್ತರವಾಗಿ ನಗರ ಪಂಚಾಯತ್ ಮುಖ್ಯಾಧಿಕಾರಿ ಪಯಶ್ವಿನಿ ನದಿಯ ನೀರು ಹಾಗೂ ಮೀನುಗಳನ್ನು ವಿಧಿ ವಿಜ್ಞಾನ ಇಲಾಖೆಗೆ ಆರೋಗ್ಯ ಇಲಾಖೆಯ ಮುಖಾಂತರ ಕಳುಹಿಸಲಾಗಿದ್ದು ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದರು.
ಅರಮನೆ ಗಯ ಭಾಗದ ಜನರ ಬಹು ಬೇಡಿಕೆಯ ಸೇತುವೆ ನಿರ್ಮಾಣ ಇನ್ನೂ ಆಗದ ಕುರಿತು, ಹಾಗೂ ಮರ್ಕಂಜದ ತೇರ್ತ ಮಜಲು ನಲ್ಲಿ ಬಿ ಎಸ್ ಎನ್ ಎಲ್ ಸರಿಯಾಗಿ ಕಾರ್ಯಚರಿಸದೆ ಮತ್ತು ಅವ್ಯವಸ್ಥೆಯಿಂದ ಇರುವ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ನಿವಾಸಿ ಬಾಲಕೃಷ್ಣ ರವರು ದೂರು ನೀಡಿದರು.
ಕಲ್ಮಡ್ಕ ಗ್ರಾಮ ಪಂಚಾಯತ್ ನಲ್ಲಿ ನರೇಗಾ ಯೋಜನೆ ಯಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಈ ಮೊದಲು ಲೋಕಾಯುಕ್ತಕ್ಕೆ ದೂರು ನೀಡಿದ್ದು ಇದುವರೆಗೂ ಯಾವುದೇ ಕ್ರಮ ವಹಿಸದ ಬಗ್ಗೆ ಸ್ಥಳೀಯ ನಿವಾಸಿಯೊಬ್ಬರು ದೂರು ನೀಡಿದ್ದಾರೆ.
ಪೌತಿ ಖಾತೆ ವಿಷಯ ಕುರಿತು ಕೆಲವು ದೂರುಗಳು ಅದೇ ರೀತಿ ಗ್ರಾಮ ಪಂಚಾಯತ್ ನಲ್ಲಿ ನೀಡುವ ನೈನ್ ಲೆವೆನ್ ಸಮಸ್ಯೆ ಬಗ್ಗೆ ಕೆಲವರು ದೂರು ನೀಡಿದ್ದು ಅಲ್ಲದೇ ಸುಳ್ಯ ತಾಲೂಕು ಕಚೇರಿಯಲ್ಲಿ ಅಕ್ರಮ ಸಕ್ರಮದ ಕಡತದ ನಕಲು ಗಾಗಿ ನಿರಂತರವಾಗಿ ಮೂರು ವರ್ಷಗಳಿಂದ ಅಲೆದಾಡಿಸುತ್ತಿದ್ದಾರೆಂದು ಸಾರ್ವಜನಿಕರೊಬ್ಬರು ದೂರು ನೀಡಿದ ಘಟನೆಯು ಈ ಸಭೆಯಲ್ಲಿ ನಡೆದಿದ್ದು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಇನ್ಸ್ಪೆಕ್ಟರ್ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್, ಚಂದ್ರಶೇಖರ ಸಿಬ್ಬಂದಿಗಳಾದ ಮಹೇಶ್, ರಾಜಪ್ಪ, ವಿವೇಕ್, ರಾಜಶೇಖರ, ವಿನಾಯಕ, ಪಂಪಣ್ಣ, ದುಂಡಪ್ಪ, ಶರತ್ ಸಿಂಗ್ ಭಾಗವಹಿಸಿದ್ದರು.
ತಹಶೀಲ್ದಾರ್ ಮಂಜುಳ, ಗ್ರೇಡ್ 2 ತಹಶೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.