
ವಿಶೇಷ ಚೇತನರ ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ರಾಜ್ಯ ವಿಶೇಷ ಚೇತನರ ಗ್ರಾಮೀಣ ಮತ್ತು ನಗರ ಕಾರ್ಯಕರ್ತರ ರಾಜ್ಯ ಸಮಿತಿ ವತಿಯಿಂದ ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯ ವಿಶೇಷ ಚೇತನ ರ ಗ್ರಾಮೀಣ ಮತ್ತು ನಗರ ಕಾರ್ಯಕರ್ತರ ರಾಜ್ಯ ಸಮಿತಿ ಸಂಸ್ಥಾಪಕ ಅಧ್ಯಕ್ಷ ಪ್ರವೀಣ್ ನಾಯಕ್ ಸುಳ್ಯ ಮತ್ತು ರಾಜ್ಯ ಸಮಿತಿ ಮುಖ್ಯಸ್ಥರು ವಿಧಾನ ಸಭಾ ಅಧ್ಯಕ್ಷ ಯು ಟಿ ಖಾದರ್ ಅವರನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದ್ದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮುಂದಿನ ಬಜೆಟ್ ನಲ್ಲಿ ರಾಜ್ಯದ ಪಂಚಾಯತ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಕಾರ್ಯಕರ್ತರಿಗೆ ಕನಿಷ್ಠ ವೇತನ ಆಗುವಂತೆ, ರಾಜ್ಯ ದ ಎಲ್ಲ ವಿಶೇಷ ಚೇತನರಿಗೆ ಸರ್ಕಾರಿ ಬಸ್ ಗಳಲ್ಲಿ ರಾಜ್ಯದ್ಯಾಂತ ಉಚಿತವಾಗಿ ಹೋಗಲು ಮತ್ತು ಎಲ್ಲ ವಿಶೇಷ ಚೇತನರಿಗೆ ಪ್ರತಿ ತಿಂಗಳ ಪೆನ್ಷನ್ ಜಾಸ್ತಿ ಮಾಡುವಂತೆ ಮನವಿ ಮಾಡಿದ್ದು, ಬೇಡಿಕೆ ಗಳನ್ನು ಸಿಎಂ ಅವರಿಗೆ ತಿಳಿಸಿ ಈ ಬಗ್ಗೆ ಸರ್ಕಾರ ದಿಂದ ಆದೇಶ ಮಾಡಲು ಸಲಹೆ ಮಾಡಬೇಕು ಎಂದು ಸ್ಪೀಕರ್ ಅವರ ಜೊತೆ ಮನವಿ ಮಾಡಲಾಗಿದೆ. ಈ ವೇಳೆ ನವಕರ್ನಾಟಕ ಅಧ್ಯಕ್ಷ ಅಂಬಾಜಿ ಮೇಟಿ, ಅಧ್ಯಕ್ಷ ಪಕೀರ ಗೌಡ ಪಾಟೀಲ್, ಸುನಿಲ್, ಫೌಝಿಯಾ ಜೊತೆಗಿದ್ದರು.