ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಹಣ ಸಂಗ್ರಾಹ ಕಚೇರಿಯನ್ನು ಬಳ್ಪ ವಿಕ್ರಮ ಯುವಕ ಮಂಡಲದಲ್ಲಿ ಉದ್ಘಾಟನೆ ಮಾಡಲಾಯಿತು.
ಕಛೇರಿಯು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಘಟ ಸಮಿತಿಯ ಉಪಾಧ್ಯಕ್ಷ ಜಲಪುಪ್ಪ, ಕಾರ್ಯದರ್ಶಿ ಸತೀಶ್, ಸಂಘಟನಾ ಕಾರ್ಯದರ್ಶಿ ಜಗನ್ನಾಥ ಪಲ್ಲತಡ್ಕ , ಜೊತೆ ಕಾರ್ಯದರ್ಶಿ ಪ್ರಜ್ಞಾ ವಿಕ್ರಮ ಯುವಕ ಮಂಡಲದ ಅಧ್ಯಕ್ಷ ಶಶಿಧರ್ ಪಾನ, ಪಂಜ ವಲಯದ ಮಾಜಿ ಅಧ್ಯಕ್ಷ ಪ್ರೇಮಾನಂದ ಶೆಟ್ಟಿ ಮತ್ತು ಕೇನ್ಯ ಗ್ರಾಮದ ಘಟ ಸಮಿತಿಯ ಅಧ್ಯಕ್ಷ ಸಂತೋಷ ರೈ ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗ್ರಾಮ ಯೋಜನೆಯ ಕಡಬ ತಾಲೂಕು ಮೇಲ್ವಿಚಾರಕರಾದ ಕಾವ್ಯಲಕ್ಪ್ಮೀ , ಬಳ್ಪ ಗ್ರಾಮದ ಸೇವಾದೀಕ್ಪಿತೆ ಶೋಭಾ ಪಂಜ, ವಲಯ ಸಂಯೋಜಕ ಜಯಶ್ರೀ ಹಾಗೂ ಪಂಜ ವಲಯದ ಸೇವಾದೀಕ್ಷಿತರು, ಮತ್ತು ಬಳ್ಳ ಗ್ರಾಮದ ಎಲ್ಲಾ ಸಂಘದ ಸದಸ್ಯರು ಉಪಸ್ಥಿತರಿದ್ದರು.