Ad Widget

ಸುಳ್ಯ‌ದಲ್ಲಿ ಆಧಾರ್ ಸೇವೆ ಸರಿಪಡಿಸಲು ತಹಶೀಲ್ದಾರ್ ಗೆ ಎಸ್.ಡಿ.ಪಿ.ಐ. ಮನವಿ – ವಾರದೊಳಗೆ ಸರಿಪಡಿಸುವ ಭರವಸೆ

. . . . . . . . .

ಸುಳ್ಯ : ಕಳೆದ ಕೆಲವು ತಿಂಗಳುಗಳಿಂದ ಸುಳ್ಯದಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಆಧಾರ್ ಸೇವಾ ಸೌಲಭ್ಯವು ಸ್ಥಗಿತಗೊಂಡಿದ್ದು
ಅಗತ್ಯ ಕಾರ್ಯಗಳಿಗೆ ಆಧಾರ್ ಕಡ್ಡಾಯವಾಗಿರುವ ಕಾರಣದಿಂದ ಆಧಾರ್ ಸೇವಾ ಸೌಲಭ್ಯವಿಲ್ಲದ ಕಾರಣ ಯಾವುದೇ ಅಗತ್ಯ ಕಾರ್ಯಗಳಿಗೆ ಕಷ್ಟ ಪಡುವಂತಾಗಿದೆ.
ಸುಳ್ಯ ತಾಲೂಕಿನಲ್ಲಿ 40 ಗ್ರಾಮಗಳಿದ್ದು, ಬೆಳ್ಳಾರೆಯ ಅಂಚೆ ಕಚೇರಿಯಲ್ಲಿ ಏಕ ಮಾತ್ರ ಆಧಾರ್ ಸೇವಾ ಕೇಂದ್ರವಿದೆ.
ಆದುದರಿಂದ ತ್ವರಿತವಾಗಿ ಸ್ಪಂದಿಸಿ ತಾಲೂಕು ಕೇಂದ್ರವಾದ ಸುಳ್ಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಆಧಾರ್ ಸೇವಾ ಕೇಂದ್ರ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಸುಳ್ಯ ತಹಶೀಲ್ದಾರರಿಗೆ ಎಸ್ಡಿಪಿಐ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿದ ತಹಶೀಲ್ದಾರರು ಒಂದು ವಾರದೊಳಗೆ ಸಮಸ್ಯೆಗೆ ಪರಿಹಾರ ಮಾಡುವ ಭರವಸೆಯನ್ನು ನೀಡಿದ್ದಾರೆ.
ನಿಯೋಗದಲ್ಲಿ ಎಸ್.ಡಿ.ಪಿ.ಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಕೊಡಿಯಮ್ಮೆ, ಎಸ್.ಡಿ.ಪಿ.ಐ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಸದಸ್ಯರಾದ ಅಡ್ವಕೇಟ್ ಅಬ್ದುಲ್ ರಶೀದ್ ಗೂನಡ್ಕ ಸುಳ್ಯ ಬ್ಲಾಕ್ ಸಮಿತಿ ಕಾರ್ಯದರ್ಶಿ ಸುಹೈಲ್ ಸುಳ್ಯ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!