
ಜನವರಿ 26ರಂದು ಬೆಳ್ಳಾರೆಯ ಸ್ನೇಹಶ್ರೀ ಮಹಿಳಾ ಮಂಡಲದ ದಶ ಸಂಭ್ರಮದ ಕೃತಜ್ಞತಾ ಸಭೆಯು ಸ್ನೇಹಿತರ ಕಲಾಸಂಘದ ಕಚೇರಿಯಲ್ಲಿ ನಡೆಯಿತು.
ಸಭಾಧ್ಯಕ್ಷತೆಯನ್ನು ಮಹಿಳಾ ಮಂಡಲದ ಅಧ್ಯಕ್ಷರಾದ ಪೂರ್ಣಿಮಾ ಪಡ್ಪು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸ್ಮರಣ ಸಂಚಿಕೆ ಸಮಿತಿಯ ಪ್ರಧಾನ ಸಂಚಾಲಕರಾದ ಕೊರಗಪ್ಪ ನಾಯ್ಕ ಕುರುಂಬುಡೇಲು ಇವರು ದಶ ಸಂಭ್ರಮದ ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತಾ ಮಾತುಗಳೊಂದಿಗೆ ಅಭಿನಂದಿಸಿದರು.ನಂತರ ದಶ ಸಂಭ್ರಮ ಕಾರ್ಯಕ್ರಮದ ಅವಲೋಕನ ನಡೆಯಿತು. ವೇದಿಕೆಯಲ್ಲಿ ಸ್ನೇಹಿತರ ಕಲಾಸಂಘದ ಅಧ್ಯಕ್ಷರಾದ ಪದ್ಮನಾಭ ಬೀಡು ಉಪಸ್ಥಿತರಿದ್ದರು. ಕೋಶಾಧಿಕಾರಿ ಕುಸುಮ ಕುರುಂಬುಡೇಲು ಸ್ವಾಗತಿಸಿ, ಶೋಭಾ ಕುರುಂಬುಡೇಲು ವಂದಿಸಿದರು. ಪೂರ್ಣಿಮಾ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಯುವಜನ ಸಂಯುಕ್ತ ಮಂಡಳಿ ಇದರ ಕೋಶಾಧಿಕಾರಿ ಸಂಜಯ್ ನೆಟ್ಟಾರು, ಸ್ನೇಹಿತರ ಕಲಾ ಸಂಘದ ಕೋಶಾಧಿಕಾರಿ ಶ್ರೀನಿವಾಸ ಕುರುಂಬುಡೇಲು, ಮಹಿಳಾ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.