
ಶ್ರೀ ಅಗ್ನಿಗುಳಿಗರಾಜ ದೈವಸ್ಥಾನ ಗಾಣಿಗಮಜಲು ಚಾಳೆಪ್ಪಾಡಿ ಇಲ್ಲಿ ವಾರ್ಷಿಕ ನೇಮೋತ್ಸವ ಪ್ರಯುಕ್ತ ನಿನ್ನೆ ಊರಿನ ಭಕ್ತಾದಿಗಳು ಹಾಗೂ ಶ್ರೀ ಕ್ಷೇತ್ರ ದ.ಗ್ರಾ.ಯೋ ಕೊಲ್ಲಮೊಗ್ರು ಬಿ ಒಕ್ಕೂಟ ಇದರ ವತಿಯಿಂದ ಧಾರ್ಮಿಕ ಶ್ರದ್ದಾ ಕೇಂದ್ರ ಸ್ವಚ್ಛತೆ ಕಾರ್ಯಕ್ರಮದಡಿ ಸ್ವಚ್ಛತೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಗ್ನಿ ಗುಳಿಗರಾಜ ದೈವಸ್ಥಾನದ ಅಧ್ಯಕ್ಷರು ಚಂದ್ರಶೇಖರ ಕೋನಡ್ಕ ಹಾಗೂ ಸದಸ್ಯರಾದ ಕಾತ್ಯಯಿನಿ ಚಾಳೆಪ್ಪಾಡಿ, ಹೇಮಂತ್ ದೋಲನ, ಹರೀಶ್ ಬಳ್ಳಡ್ಕ ಮತ್ತು ಊರಿನ ಭಕ್ತಾದಿಗಳು, ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಕೃಷ್ಣಪ್ಪ ಎಂ, ಸೇವಾಪ್ರತಿನಿಧಿ ರೇಖಾ ಕಟ್ಟ ಹಾಗೂ ಸಂಘದ ಸದಸ್ಯರು ಬಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಾರ್ಷಿಕ ನೆಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.