
ಸುಳ್ಯ ನಗರ ವ್ಯಾಪ್ತಿ ಯಲ್ಲಿರುವ ಬೆಟ್ಟಂಪಾಡಿ ಆಶ್ರಯ ಕಾಲೋನಿಯಲ್ಲಿ ನೀರಿನ ಟ್ಯಾಂಕ್ ಸ್ವಚ್ಛ ಮಾಡದೆ ಮನೆಗಳಲ್ಲಿ ಹಲವು ದಿನಗಳಿಂದ ಮಣ್ಣು ಮಿಶ್ರಿತ ಕಲುಷಿತ ನೀರು ಬರುತ್ತಿದ್ದು ಇಲ್ಲಿನ ನಾಗರೀಕರಿಗೆ ಬಹಳ ತೊಂದರೆಯಾಗಿದ್ದು ಸ್ಥಳೀಯರು ತಿಳಿಸಿದಂತೆ ಅಡುಗೆಗೆ ಬಳಸಲು, ಸ್ನಾನ ಮಾಡಲು, ಬಟ್ಟೆ ತೊಳೆಯಲು, ಶಾಲೆಗೆ ಹೋಗುವ ಮಕ್ಕಳ ಸಮವಸ್ತ್ರ ಇನ್ನಿತರ ದೈನಂದಿನ ನಿತ್ಯೋಪಯೋಗಿ ಕೆಲಸಗಳಿಗೆ ಸಮಸ್ಯೆಯಾಗಿದ್ದು ಕೆಲವರು ಅನಾರೋಗ್ಯದಿಂದ ಬಳಲಿದ್ದಾರೆ. ನೀರನ್ನು ಕುಡಿಯಲು ಅಸಾಧ್ಯವಾಗಿದ್ದು ಈ ಸಮಸ್ಯೆ ಬಗ್ಗೆ ನ. ಪಂ. ಗಮನಕ್ಕೆ ತಂದರೂ ಕೂಡ ಯಾವುದೇ ಪರ್ಯಾಯ ವ್ಯವಸ್ಥೆಯಾಗಿಲ್ಲ ವೆಂದು ಸ್ಥಳೀಯರು ನಾಗರೀಕರು ಬೇಸರಗೊಂಡಿದ್ದಾರೆ. ಆದ್ದರಿಂದ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸಿ ಕನಿಷ್ಠ ಮೂರು ತಿಂಗಳಿಗೊಮ್ಮೆ ಯಾದರು ಕಡ್ಡಾಯವಾಗಿ ಈ ಕೂಡಲೇ ಸ್ವಚ್ಚಗೊಳಿಸಿ ಶುದ್ಧ ನೀರಿನ ವ್ಯವಸ್ಥೆ ಯನ್ನು ಮಾಡಿಕೊಡಬೇಕಾಗಿ ವಿನಂತಿಸಿದ್ದಾರೆ.