ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ಅವಭೃತ ಸ್ನಾನದ ಮೆರವಣಿಗೆಯ ಸಂದರ್ಭದಲ್ಲಿ ಡಾ.ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮದರ್ಜೆ ಕಾಲೇಜಿನ ಬಳಿ ಶ್ರೀ ದೇವರಿಗೆ ಪೂಜೆ ಸಲ್ಲಿಸಲಾಯಿತು. ಹಾಗೂ ಭಕ್ತಾದಿಗಳಿಗೆ ತಂಪುಪಾನೀಯ ವ್ಯವಸ್ಥೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಬಾಲಸುಬ್ರಮಣ್ಯ ಪಿ ಎಸ್ ಹಾಗೂ ಉಪನ್ಯಾಸಕರಾದ ಯಶೋದ ಹಾಗೂ ಪೊನ್ನಪ್ಪ ಹಾಗೂ ಕಚೇರಿ ಸಿಬ್ಬಂದಿಗಳಾದ ಗೀತಾ ಮತ್ತು ಮೋಹನದಾಸ್
ಹಾಗೂ ವಿದ್ಯಾರ್ಥಿಗಳಾದ ಅಕ್ಷಯ್, ಪುನೀತ್, ವಿಕ್ರಮ್, ಶ್ರುತಿ, ಭೂಮಿಕಾ, ತೇಜಸ್ವಿತ್, ಸೌರವ್ ಹಾಗೂ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪೆರುವಾಜೆ ಮತ್ತು ಹಳೇವಿದ್ಯಾರ್ಥಿಗಳಾದ ರಂಜಿತ್ ಪೆರುವಾಜೆ ಹಾಗೂ ದೀಕ್ಷಿತ್ ಪೆರುವಾಜೆ ಮೊದಲಾದವರು ಉಪಸ್ಥಿತರಿದ್ದರು.
- Wednesday
- January 22nd, 2025