Ad Widget

ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನಿಂದ ನಿರಂತರ ಸಮಾಜ ಸೇವಾ ಚಟುವಟಿಕೆಗಳು

ಸುಬ್ರಹ್ಮಣ್ಯ ಜ.18: ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಪ್ರಸಕ್ತ ಸಾಲಿನಲ್ಲಿ ಸುಬ್ರಹ್ಮಣ್ಯದ ಆಸು-ಪಾಸುಗಳಾದ ಹರಿಹರ ಕೊಲ್ಲಮೊಗ್ರು, ಮರ್ದಾಳ ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು ನಾಲ್ಕು ಲಕ್ಷ ರೂಪಾಯಿಗಳ ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸಿರುತ್ತದೆ ಎಂದು ಕ್ಲಬ್ ಅಧ್ಯಕ್ಷ ರಾಜೇಶ್ ಎನ್.ಎಸ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.
ಮರ್ಧಾಳದ ಬೆಥನಿ ಜೀವನ್ ಜ್ಯೋತಿ ವಿಶೇಷ ಚೇತನ ಮಕ್ಕಳ ಶಾಲೆಗೆ ಮಧ್ಯಾಹ್ನದ ಭೋಜನ ಅನ್ನದಾನಕ್ಕೆ 10,000/- ರೂ. ಗಳ ಧನಸಹಾಯವನ್ನು ಕಳೆದೆರಡು ವರ್ಷಗಳಿಂದ ನೀಡುತ್ತಾ ಬಂದಿರುತ್ತದೆ.
ಹಾಗೆಯೇ ದೇವರ ಗದ್ದೆಯ ಕೊರಗಜ್ಜನ ಕಟ್ಟೆಯ ಮೇಲ್ಚಾವಣಿ ರಚಿಸಲು ಒಂದು ಲಕ್ಷ ಧನಸಹಾಯ ನೀಡಿರುತ್ತಾರೆ. ಹರಿಹರದ ಕ್ರೀಡಾ ಸಂಘದವರು ಖರೀದಿಸಿದ ಆಂಬುಲೆನ್ಸ್ ಗೆ 50,000/- ಧನಸಹಾಯ, ಕಲ್ಮಕ್ಕಾರು ಗ್ರಾಮದ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಮತಿ ಪದ್ಮಾವತಿ ಅವರಿಗೆ ರೂ.10,000/- ಧನ ಸಹಾಯ, ಸುಬ್ರಹ್ಮಣ್ಯದ ಮೃತ ರಿಕ್ಷಾ ಚಾಲಕ ಪುಟ್ಟಣ್ಣನವರಿಗೆ ಗ್ರಹ ನಿರ್ಮಾಣಕ್ಕೆ 10,000/- ರೂಪಾಯಿ ಧನಸಹಾಯ, ಕಲ್ಲಾಜೆ ಅಂಗನವಾಡಿ ನಲಿಕಲಿಗೆ 5,000/- ಧನಸಹಾಯ, ಕೊಲ್ಲಮೊಗ್ರು ಕೆವಿಜಿ ಸಂಸ್ಥೆಯಲ್ಲಿ ಓದುತ್ತಿರುವ ಬಡ 3 ಮಕ್ಕಳಿಗೆ ತಲಾ 3,000/- ದಂತೆ ಏಳು ವಿದ್ಯಾರ್ಥಿಗಳಿಗೆ ರೂ 21,000/- ಧನಸಹಾಯ, ಜಿಲ್ಲಾ ಕಾರ್ಯಕ್ರಮಗಳಿಗೆ 63000/- ಧನಸಹಾಯ, ಲೈನ್ಸ್ ಜಿಲ್ಲೆಗೆ 5,000/- ಧನಸಹಾಯ, ಜಿಲ್ಲಾ ಪ್ರಾಜೆಕ್ಟಿಗೆ 5,000/- ಧನಸಹಾಯ ನೀಡುತ್ತಾ ಬರಲಾಗಿದೆ ಎಂದು ಅವರು ತಿಳಿಸಿದರು.
ಸೋಮವಾರ ಕುಕ್ಕೆ ಸುಬ್ರಹ್ಮಣ್ಯ ಕ್ಲಬ್ ಗೆ ಜಿಲ್ಲಾ ರಾಜಪಾಲರಾದ ಬಿ.ಎಮ್, ಭಾರತಿ ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ರಥ ಅಲಂಕಾರದ ರೂವಾರಿ ತನಿಯಪ್ಪ , ಅಂತರಾಷ್ಟ್ರೀಯ ಯೋಗ ಪ್ರಶಸ್ತಿ ವಿಜೇತೆ ಕುಮಾರಿ ಗೌರಿತ ಮತ್ತು ವಿಠಲ ಮೂಲ್ಯ ಅವರುಗಳನ್ನು ಸನ್ಮಾನಿಸಲಾಗುವುದೆಂದು ರಾಜೇಶ್ ಏನ್. ಎಸ್ .ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ವಲಯ ಅಧ್ಯಕ್ಷ ಪ್ರೊ.ರಂಗಯ್ಯ ಶೆಟ್ಟಿಗಾರ್, ನಿಕಟ ಪೂರ್ವ ಅಧ್ಯಕ್ಷ ರಾಮಚಂದ್ರ ಪಳಂಗಾಯ, ಕಾರ್ಯದರ್ಶಿ ಕೃಷ್ಣ ಕುಮಾರ್ ಬಾಳುಗೋಡು, ಕೋಶಾಧಿಕಾರಿ ಮೋಹನ್ ದಾಸ್ ರೈ ಉಪಸ್ಥಿತರಿದ್ದರು.

. . . . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!