ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 11 ಸ್ಥಾನ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಓರ್ವ ಗೆಲುವು ಸಾಧಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶ್ರೀಪತಿ ಭಟ್ ಮಜಿಗುಂಡಿ, ಕರುಣಾಕರ ಹಾಸ್ಪಾರೆ, ಜಯಪ್ರಕಾಶ್ ಕುಂಚಡ್ಕ, ಸುಧಾಕರ ಆಲೆಟ್ಟಿ, ಹರಿಪ್ರಸಾದ್ ಕಾಪುಮಲೆ, ಚಿದಾನಂದ ಕೋಲ್ಟಾರು ಹೆಚ್ಚು ಮತ ಪಡೆಯುವ ಮೂಲಕ ಸಾಮಾನ್ಯ ಕ್ಷೇತ್ರದ ಎಲ್ಲಾ 6 ಸ್ಥಾನಗಳನ್ನು ಉಳಿಸಿಕೊಂಡಿದೆ.
ಮಹಿಳಾ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ವಿದ್ಯಾ ಕುಡೆಕಲ್ಲು, ಉಷಾ ಪಾಲಡ್ಕ, ಪ.ಪಂಗಡ ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮೇಶ್ ನಾಯ್ಕ ಮಜಿಗುಂಡಿ, ಪ.ಜಾತಿ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ರಾಮದಾಸ ಮೊರಂಗಲ್ಲು, ಹಿಂದುಳಿದ ವರ್ಗ ಪ್ರವರ್ಗ ಎ’ ಮೀಸಲು ಸ್ಥಾನ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಂಗಾಧರ ಬಿ.ಕೆ ಬಡ್ಡಡ್ಕ 586 ಮತ ಪಡೆದು ವಿಜಯಿಯಾಗಿದ್ದಾರೆ.
ಹಿಂದುಳಿದ ವರ್ಗ ಪ್ರವರ್ಗ ಬಿ’ ಸ್ಥಾನದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧರ್ಮಪಾಲ ಕೊಯಿಂಗಾಜೆ 566 ಮತ ಪಡೆದು ಜಯಗಳಿಸಿದ್ದಾರೆ.