
ಘಟನೆಯ ಕುರಿತ ಸಂಪೂರ್ಣ ಮಾಹಿತಿ
ಸುಳ್ಯ ತಾಲೂಕಿನ ನೆಲ್ಲೂರು- ಕೆಮ್ರಾಜೆಯ ಕೋಡಿಮಜಲು ಎಂಬಲ್ಲಿ ನಿನ್ನೆ ತಡರಾತ್ರಿ ಪತಿಯೇ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ, ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ರಾಮಚಂದ್ರ 52 ವರ್ಷ ಹಾಗೂ ಕೊಲೆಗೀಡಾದ ಪತ್ನಿಯನ್ನು ವಿನೋದ 42 ವರ್ಷ ಎಂದು ಗುರುತಿಸಲಾಗಿದೆ. ಕೊಲೆಗೆ ಕೌಟುಂಬಿಕ ಕಲಹ ಕಾರಣ ಎಂದು ಹೇಳಲಾಗುತ್ತಿದ್ದು
ಘಟನೆಯ ಕುರಿತು ಸ್ಥಳೀಯರ ಪ್ರಕಾರ ಕೌಟೌಂಬಿಕ ಕಲಹ ಹಿನ್ನೆಲೆಯಲ್ಲಿ ಗುಡುಹೊಡೆಯುವೆ ಎಂದು ಪದೇ ಪದೇ ಹೇಳುತ್ತಿದ್ದು ನಿನ್ನೆ ತಡ ರಾತ್ರಿಯು ಗಲಾಟೆ ನಡೆದ ಸಂಧರ್ಭದಲ್ಲಿ ಕೋವಿ ಕೈಯಲ್ಲಿ ಹಿಡಿದುಕೊಂಡಿದ್ದು ಒಮ್ಮೆಲೆ ಗುಂಡು ಸಿಡಿದಿದ್ದು ಇದರ ಶಬ್ದ ಕೇಳಿದ ಪುತ್ರ ಬಂದು ನೋಡಿದಾಗ ತಾಯಿಗೆ ಗುಂಡು ತಗುಲಿ ಕೆಳಕ್ಕೆ ಬಿದ್ದಿದ್ದರು ಹಾಗೂ ಆರೋಪಿಯ ಕೈಯಲ್ಲಿ ಇದ್ದ ಕೋವಿಯನ್ನು ಹಿಡಿದು ಎಳೆದು ನೆರೆಯ ಮನೆಗೆ ಕೊಂಡು ಹೋಗಿ ಘಟನೆಯನ್ನು ವಿವವರಿ ಹಿಂತುರುಗಿದಾಗ ಆರೋಪಿಯು ರಬ್ಬರ್ ಶೀಟ್ ಮಾಡಲು ಉಪಯೋಗಿಸುವ ಆ್ಯಸಿಡ್ ಸೇವಿಸಿ ಚಡಪಡಿಸುತ್ತಿದ್ದು ಬಳಿಕ ಸ್ಥಳೀಯರು ಪೋಲಿಸ್ ಅಧಿಕಾರಿಗಳ ಗಮನಕ್ಕೆ ತಂದರು ಎಂದು ಹೇಳಲಾಗುತ್ತಿದ್ದು ಈ ಘಟನೆಯ ಕುರಿತ ನೈಜ ಚಿತ್ರಣವನ್ನು ಪೋಲಿಸ್ ಇಲಾಖೆಯೇ ಸ್ಪಷ್ಟ ಪಡಿಸಬೇಕಾಗಿದ್ದು ಈ ಘಟನೆಯ ಕುರಿತ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.