ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಜ.15 ರಂದು ಚುನಾವಣೆ ನಡೆದು ಫಲಿತಾಂಶ ಪ್ರಕಟಗೊಂಡಿದ್ದು ಉದಯಕುಮಾರ್ ಬೆಟ್ಟ ನೇತೃತ್ವದ ಸಮನ್ವಯ ರಂಗ ಮತ್ತೆ ಆಡಳಿತಕ್ಕೇರಿದೆ. ಸಮನ್ವಯ ರಂಗದ 10 ಹಾಗೂ ಸಹಕಾರ ರಂಗದ ಇಬ್ಬರು ಗೆಲುವು ಸಾಧಿಸಿದ್ದಾರೆ
ಸಮನ್ವಯ ರಂಗದ ಪಿ ಉದಯಕುಮಾರ್ ಬೆಟ್ಟ, ಅಶೋಕ ಜಿ., ತೃಪ್ತಿ ಯು., ರವಿಕಿರಣ ಎ., ಹರೀಶ್ ಎಂ., ಮೀನಾಕ್ಷಿ ಬಿ., ಸುಧಾ ಎಸ್. ಭಟ್, ಮಹೇಶ ಎ., ವಿಶ್ವನಾಥ, ಯು. ರಾಮ ನಾಯ್ಕ ಹಾಗೂ ಸಹಕಾರ ರಂಗದ ಯಂ. ಬಾಲಕೃಷ್ಣ ಹಾಗೂ ಗೋಪಾಲ ಪಿ. ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.