Ad Widget

ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ದರ್ಗಾ ಶರೀಫ್ ಉರೂಸ್ , ಧಾರ್ಮಿಕ ಹಾಗೂ ಸೌಹಾರ್ದ ಕಾರ್ಯಕ್ರಮ.

ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ಮಖಾಂ ಉರೂಸ್ ಹಾಗೂ ಐದು ದಿನಗಳ ಧಾರ್ಮಿಕ ಪ್ರಭಾಷಣ ಜ 17 ರಿಂದ 21 ರ ತನಕ ನಡೆಯಲಿದೆ ಎಂದು ಅಜ್ಜಾವರ ಮಸೀದಿ ಖತೀಭರಾದ ಹಸೈನಾರ್ ಫೈಝಿ ಕೊಡಗು ತಿಳಿಸಿದರು.

. . . . . . . . .

ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಜಾತಿ ಮತ ಭೇದವಿಲ್ಲದೆ ಸರ್ವ ಧರ್ಮಿಯರು ಗೌರವಿಸಲ್ಪಡುವ ಹಲವಾರು ರೋಗಗಳಿಗೆ ಪರಿಹಾರವನ್ನು ಬಯಸಿ ಬಂದ ಭಕ್ತಾದಿಗಳಿಗೆ ಪರಿಹಾರವನ್ನು ನೀಡುವ ಅಲ್ಲಾಹುವಿನ ಸಾಮಿಷ್ಯ ಪಡೆದ ಮಹಾತ್ಮ ರುಗಳ ಮಖ್ ಬರ ವಿರುವ ಪುಣ್ಯಸ್ಥಳವಾದ ಅಜ್ಞಾವರ ಮೇನಾಲ ದರ್ಗಾ ಶರೀಫ್ ನಲ್ಲಿ ಪ್ರತೀ ವರ್ಷ ನಡೆಸಿಕೊಂಡು ಬರುವ ಉರೂಸ್ ಸಮಾರಂಭ ವನ್ನು ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲು ಉದ್ದೇಶಿಸಲಾಗಿದೆ.

ಉರೂಸ್ ಕಾರ್ಯಕ್ರಮವು ಜನವರಿ 17 ರಂದು ಪ್ರಾರಂಭಗೊಂಡು ಜನವರಿ 21 ರಂದು ಸಮಾರೋಪ ಗೊಳ್ಳಲಿದೆ ಉರೂಸ್ ಕಾರ್ಯಕ್ರಮದಲ್ಲಿ ಐದು ದಿನಗಳ ಧಾರ್ಮಿಕ ಮತಪ್ರವಚನ ಕಾರ್ಯಕ್ರಮವೂ ನಡೆಯಲಿದೆ. ಉರೂಸ್ ಸಮಾರಂಭದಲ್ಲಿ ಅನೇಕ ಉಲಮಾ ಉಮರಾಗಳು ಭಾಗವಹಿಸಲಿದ್ದು ಉರೂಸ್ ಸಮಾರಂಭ ಪ್ರಯುಕ್ತ ಸಮಾರೋಪ ಸಮಾರಂಭದಂದು ಸರ್ವ ಧರ್ಮ ಸೌಹಾರ್ದ ಕಾರ್ಯಕ್ರಮ ನಡೆಯಲಿದೆ

ಜನವರಿ 17 ರಂದು ಶುಕ್ರವಾರ ಅಜ್ಜಾವರ ಮುಹಿಯುದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಬಹು:ಸಯ್ಯದ್ ಅಹ್ಮದ್ ಪೂಕೋಯ ತಂಗಳ್ ಪುತ್ತೂರು) ದುಆ ನೇತೃತ್ವ ವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ನಂತರ ಧಾರ್ಮಿಕ ಮತಪ್ರವಚನ ನಡೆಯಲಿದ್ದು ಬಹು ಹಸೈನಾರ್ ಫೈಝಿ ಕೊಡಗು ಖತೀಬರು ಅಜ್ಞಾವರ ಉಪನ್ಯಾಸ ನೀಡಲಿದ್ದಾರೆ.

ಜನವರಿ 18 ರಂದು ಶನಿವಾರ ಅಜ್ಜಾವರ ಮುಹಿಯುದ್ದೀನ್ ಜುಮಾ ಮಸೀದಿ ಅಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಭಾಷಣಗಾರ ಬಹು ಅಬ್ದುಲ್ ಅಝೀಝ್ ಆಶ್ರಫಿ ಪಾಣತ್ತೂರ್ ಉಪನ್ಯಾಸ ನೀಡಲಿದ್ದಾರೆ.

ಜನವರಿ 19 ರಂದು ಆದಿತ್ಯವಾರ ಮೇನಾಲ ದರ್ಗಾ ಶರೀಫ್ ನಲ್ಲಿ ಮಗ್ರಿಬ್ ನಮಾಜು ಬಳಿಕ ಮಖಾಂ ಅಲಂಕಾರ ಮತ್ತು ದಿಕ್ ಹಲ್ಮಾ ನಡೆಯಲಿದೆ ಕಾರ್ಯಕ್ರಮದ ನೇತೃತ್ವವನ್ನು ಸಯ್ಯದ್ ಹಕೀಂ ತಂಗಳ್ ಆದೂರು ನೆರವೇರಿಸಲಿದ್ದಾರೆ. ಬಹು: ಖಲೀಲ್ ಹುದವಿ ಅಲ್ ಮಾಲಿಕಿ ಕಾಸರಗೋಡ್ ಉಪನ್ಯಾಸ ನೀಡಲಿದ್ದಾರೆ.

ಜನವರಿ 20 ರಂದು ಸೋಮವಾರ ಮೇನಾಲ ದರ್ಗಾ ಶರೀಫ್ ವಠಾರದಲ್ಲಿ ನಡೆಯುವ ಸಭಾಕಾರ್ಯಕ್ರಮದಲ್ಲಿ ಬಹು: ಅಲ್ ಹಾಜ್ ಅಬ್ದುಲ್ ಮಜೀದ್ ಬಾಖವಿ ಉಪನ್ಯಾಸ ನೀಡಲಿದ್ದಾರೆ.

ಜನವರಿ 21 ರಂದು ಮಂಗಳವಾರ ರಾತ್ರಿ 7:00ಕ್ಕೆ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಊರಿನ ಸರ್ವಧರ್ಮೀಯರು ಭಾಗವಹಿಸಲಿದ್ದಾರೆ ಖತೀಬರಾದ ಬಹು ಹಸೈನಾರ್ ಫೈಝಿ ಕೊಡಗು ರವರ ದುವಾದೊಂದಿಗೆ ಆರಂಭ ಗೊಳ್ಳುವ ಸೌಹಾರ್ದ ಸಮಾರಂಭದ ಅಧ್ಯಕ್ಷತೆಯನ್ನು ದರ್ಗಾ ಶರೀಫ್ ಮುಕ್ತೇಸರರಾದ ಎಂ. ಗುಡ್ಡಪ್ಪ ರೈ ವಹಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಲಕ್ಷ್ಮೀಶ ಗಬ್ಬಲಡ್ಕ ( ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯರು ) ಧನಂಜಯ ಅಡ್ಪಂಗಾಯ ( ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಧಾರ್ಮಿಕ ನೇತಾರ) ಪ್ರೊ. ಡಿ ಜವರೇಗೌಡ ( ನಿವೃತ್ತ ಪ್ರಾಂಶುಪಾಲರು ಕುರುಂಜಿಬಾಗ್ ಸುಳ್ಯ ದ. ಕ) ಹಾಗೂ ಬಹು ಮೌಲಾನ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಹಾಗೂ ಸರ್ವ ಧರ್ಮೀಯರು ಭಾಗವಹಿಸಲಿದ್ದಾರೆ.

ನಂತರ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದ‌ರ್ ಹಾಜಿ ಎ ವಹಿಸಲಿದ್ದಾರೆ ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ.ಜಿಲ್ಲಾ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮ ಇದರ ಅಧ್ಯಕ್ಷರಾದ ಬಹು ಶೈಖುನಾ ಅಲ್ಹಾಜ್ ಎನ್.ಪಿ.ಎಂ ಝೈನುಲ್ ಅಬಿದೀನ್ ತಂಗಳ್ ಕುನ್ನುಂಗೈ ಕೇರಳ ನೆರವೇರಿಸಲಿದ್ದಾರೆ. ಅಂತಾರಾಷ್ಟ್ರೀಯ ಪ್ರಭಾಷಣಗಾರ ಬಹು: ಶಫೀಕ್ ಬದ್ರಿ ಅಲ್ ಬಾಖವಿ ಕಡೈಕಲ್ ಕೇರಳ ಉಪನ್ಯಾಸ ನೀಡಲಿದ್ದಾರೆ.

ಧಾರ್ಮಿಕ ಉಪನ್ಯಾಸವು ಪ್ರತೀದಿನ ರಾತ್ರಿ 8.00 ಕ್ಕೆ ಆರಂಭಗೊಳ್ಳುವುದು ಜನವರಿ 21 ರಂದು ಸಮಾರೋಪ ಸಮಾರಂಭ ರಾತ್ರಿ ಕೂಟು ಪ್ರಾರ್ಥನೆ, ಮೌಲಿದ್ ಪಾರಾಯಣ ಮತ್ತು ಅನ್ನದಾನ ನಡೆಯಲಿದೆ ಎಂದು ತಿಳಿಸಿದರು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ , ಕಾರ್ಯದರ್ಶಿ ಅಬೂಬಕ್ಕರ್ ಎ , ಕೋಶಾಧಿಕಾರಿ ಶರೀಫ್ ರಿಲಾಕ್ಸ್ , ಜೊತೆ ಕಾರ್ಯದರ್ಶಿ ಖಾದರ್ ಎನ್ , ಅಂದಂ ಹಾಜಿ , ಅಬ್ದುಲ್ಲ ಎ ಉಪಸ್ಥಿತಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!