ಸುಳ್ಯ: ಸುಳ್ಯದ ಬೀರಮಂಗಲದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯು ಬೆಳ್ಳಿ ಹಬ್ಬ ಸಂಭ್ರಮದಲ್ಲಿದೆ.
ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮ ಜ.16ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ದಿನ ಪೂರ್ತಿ ಆಚರಿಸಲಾಗುವುದು ಎಂದು ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಫಾ. ವಿಕ್ಟರ್ ಡಿಸೋಜ ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯು ಕಳೆದ 25 ವರ್ಷಗಳಿಂದ ಮೌಲ್ಯಯುತವಾದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಹಲವಾರು ಉದಯೋನ್ಮುಖ ಪ್ರತಿಭೆಗಳು ಇಲ್ಲಿ ಶಿಕ್ಷಣ ಪಡೆದು ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಇದೀಗ ಬೆಳ್ಳಿ ಹಬ್ಬ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಪ್ರಯುಕ್ತ ಜ.16ರಂದು ದಿನಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜ.16 ರಂದು ಬೆಳಿಗ್ಗೆ 10 ಗಂಟೆಗೆ ಧ್ವಜಾರೋಹಣ ಮತ್ತು ಉದ್ಘಾಟನಾ ಸಮಾರಂಭ ನಡೆಯಲಿದೆ.ಪುತ್ತೂರು ಮಾಯಿದೇ ದೇವೂಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಫಾ. ಲಾರೆನ್ಸ್ ಮಸ್ಕರೇಜಸ್ ಅಧ್ಯಕ್ಷತೆ ವಹಿಸುವರು. ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಬಳಿಕ ಕ್ರೀಡಾ, ಕಲಾ ಸ್ಪರ್ಧೆಗಳ ಸಾಧಕರಿಗೆ ಬಹುಮಾನ ವಿತರಣೆ, ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಭೋಜನದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರೆಯಲಿದೆ.
ಸಂಜೆ 5.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಅತಿ ವಂದನೀಯ ಡಾ.ಪೀಠರ್ ಪೌಲ್ ಸಾಲ್ದಾನ ಅಧ್ಯಕ್ಷತೆ ವಹಿಸುವರು. ಶಾಸಕಿ ಭಾಗೀರತಿ ಮುರುಳ್ಯ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್. ಯು.ಕೆ., ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ. ಡಾ.ಕೆ.ವಿ.ಚಿದಾನಂದ, ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್, ಸಂತ ಜೋಸೆಫ್ ಶಾಲೆಯ ಸ್ಥಾಪಕರಾದ ಫಾ.ಎಲಿಯಾಸ್ ಡಿಸೋಜ, ಶಾಲೆಯ ಮಾಜಿ ಸಂಚಾಲಕರು ಹಾಗೂ ಸಿ.ಒ.ಡಿ.ಪಿ ಮಂಗಳೂರು ಇದರ ಕಾರ್ಯದರ್ಶಿ ಫಾ.ವಿನ್ಸೆಂಟ್ ಡಿಸೋಜ, ಬೆಂಗಳೂರು ಆರ್‌ಎಫ್‌ಟಿಎಸ್‌ನ ಪ್ರೊವಿನ್‌ಸಿಯಲ್ ಸುಪೀರಿಯರ್ ಸಿಸ್ಟರ್ ಮೇರ್ಸಿ ಕುಟ್ಟಿ, ಶಾಲೆಯ ಮಾಜಿ ಮುಖ್ಯೋಪಾಧ್ಯಾಯದ ಸಿಸ್ಟರ್ ಬಿನೋಮ ಚಾಕೋ ನಗರ ಪಂಚಾಯತ್ ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತಾ, ಸಂತ ಬ್ರಿಜಿಡ್ಸ್ ಚರ್ಚ್‌ನ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷ ವಿಲ್ಯಮ್ ಲಸ್ರಾದೋ, ಪಾಲನಾ ಸಮಿತಿಯ ಉಪಾಧ್ಯಕ್ಷ ನವೀನ್ ಮಚ್ಚಾದೋ, ಕಾರ್ಯದರ್ಶಿ ಜೂಲಿಯಾನ ಕಾಸ್ತಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಸಮಾರಂಭದಲ್ಲಿ ಈ ಹಿಂದೆ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ, ಸಂಚಾಲಕರಾಗಿ ದುಡಿದವರನ್ನು ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.
ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಮೇರಿ ಸ್ಟೆಲ್ಲಾ ಮಾತನಾಡಿ ‘ಶಾಲೆಯ ಶೈಕ್ಷಣಿಕ ವ್ಯವಸ್ಥೆ ಹಾಗೂ ಶೈಕ್ಷಣಿಕ ಬೆಳವಣಿಗೆಗಳ ಬಗ್ಗೆ ವಿವರಿಸಿದರು. ಶಾಲೆಯಲ್ಲಿ ಎಲ್ ಕೆ ಜಿ ಯಿಂದ ಎಸ್‌ಎಸ್‌ಎಲ್‌ಸಿ ತನಕ 1419 ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಶಾಲೆಯಲ್ಲಿ ಅತ್ಯಂತ ಉತ್ತಮ ಫಲಿತಾಂಶ ದಾಖಲಾಗಿದೆ. ಬಹುತೇಕ ವರ್ಷಗಳಲ್ಲಿ ಶೇ.100 ಫಲಿತಾಂಶ ಬಂದಿದೆ ಎಂದು ವಿವರಿಸಿದರು.
ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಅನುರಾಧಾ ಕುರುಂಜಿ ಮಾತನಾಡಿ ‘ಕಳೆದ 25 ವರ್ಷಗಳಿಂದ ಮೌಲ್ಯಯುತವಾದ ಶಿಕ್ಷಣ ನೀಡುತ್ತಾ ಬಂದಿರುವ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಬೆಳ್ಳಿ ಹಬ್ಬ ಮಹೋತ್ಸವವನ್ನು ಸ್ಮರಣೀಯವಾಗಿಸಲು ಸ್ಮರಣ ಸಂಚಿಕೆಯನ್ನು ಹೊರ ತರಲು ನಿರ್ಧರಿಸಲಾಗಿದೆ. ಶಾಲೆಯ 25 ವರ್ಷನೇ ವರ್ಷದ ಅಂಗವಾಗಿ ನಡೆಸುವ ವಿವಿಧ ಕಾರ್ಯಕ್ರಮಗಳ ವಿವರ, ಮೌಲ್ಯಯುತ ಲೇಖನಗಳನ್ನು ಒಳಗೊಂಡು ಅತ್ಯುತ್ತಮ ಸ್ಮರಣ ಸಂಚಿಕೆ ಹೊರತರಲು ಸಿದ್ಧತೆ ನಡೆಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸಂತ ಬ್ರಿಜಿಡ್ಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ನವೀನ್ ಮಚ್ಚಾದೋ, ಬೆಳ್ಳಿಹಬ್ಬ ಆಚರಣಾ ಮಹೋತ್ಸವ ಸಮಿತಿಯ ಸಂಚಾಲಕ ಹಾಗೂ ಶಾಲಾ ರಕ್ಷಕ ಸಂಘದ ಉಪಾಧ್ಯಕ್ಷ ಹೇಮನಾಥ ಬಿ, ಪ್ರಾಥಮಿಕ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಶಶಿಧರ ಎಂ.ಜೆ ಮಾತನಾಡಿದರು.