Ad Widget

ಮೊಗ್ರ : ರಕ್ಷಾ ನಾಗರಿಕ ಬಳಗ ಅಸ್ತಿತ್ವಕ್ಕೆ

. . . . . . . . .

ಗುತ್ತಿಗಾರು ಗ್ರಾಮದ ಮೊಗ್ರ, ಮಲ್ಕಜೆ, ಕಿನ್ನಿಕುಮೇರಿ ಭಾಗದ ಸುಮಾರು 60 ಮನೆಗಳ ಸದಸ್ಯರು ಒಟ್ಟು ಸೇರಿ ರಕ್ಷಾ ನಾಗರಿಕ ಬಳಗ ಎಂಬ ಸಮಾಜಸೇವಾ ಸಂಘಟನೆಯನ್ನು ರಚಿಸಿರುತ್ತಾರೆ.
ಸಂಘಟನೆಯ ಅಧ್ಯಕ್ಷರಾಗಿ ಲ| ನಾಗೇಶ್ ಕಿನ್ನಿಕುಮೇರಿ, ಪ್ರಧಾನ ಕಾರ್ಯದರ್ಶಿಯಾಗಿ ಜೇಸಿ ಜೀವನ್ ಮಲ್ಕಜೆ, ಖಜಾಂಚಿಯಾಗಿ ದಯಾನಂದ ಕಿನ್ನಿಕುಮೇರಿಯವರನ್ನು ಆಯ್ಕೆ ಮಾಡಲಾಯಿತು.
ಸಂಚಾಲಕರಾಗಿ ಲಯನ್ ಕರುಣಾಕರ ಎಣ್ಣೆಮಜಲು, ಸುಧಾಕರ ಮಲ್ಕಜೆ, ಉಮೇಶ ಮಕ್ಕಿ, ರೋ.ಮೋಹನದಾಸ್ ಎಣ್ಣೆಮಜಲು, ತಿಮ್ಮಪ್ಪ ಕಿನ್ನಿಕುಮೇರಿ, ಅಭಿಲಾಶ್, ಅವಿನಾಶ್ ಮಲ್ಕಜೆ, ಚೇತನ್, ಬೆಳ್ಯಪ್ಪ ಬಲ್ಬೇರಿ, ವಿನ್ಯಾಸ್ ಎಡೋಣಿ, ವಸಂತ ಮಲ್ಕಜೆ, ನಾಗೇಶ. ಕೆ, ಆರ್ನೂಜಿ ಕರುಣಾಕರ, ಜೇಸಿ. ಗಗನ್ ರವರುಗಳನ್ನು ನೇಮಿಸಲಾಯಿತು.
ಊರಿನ ರಸ್ತೆ ದುರಸ್ತಿ, ವಿದ್ಯುತ್ ಸಮಸ್ಯೆ,
ಆರೋಗ್ಯ ಹಾಗೂ ಶಾಲಾ ಮಕ್ಕಳ ವಿದ್ಯಾಭ್ಯಾಸ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಶ್ರಮಿಸಿ ಅಭಿವೃದ್ಧಿಗೊಳಿಸುವ ಕನಸು ಈ ಸಂಘಟನೆಯದ್ದಾಗಿದೆ.
ಊರಿನ ಹಿರಿಯರಾದ ಕಿನ್ನಿಕುಮೇರಿ ಗುಡ್ಡಪ್ಪ ಮಾಸ್ತರ್ ರವರು ದೀಪ ಬೆಳಗಿಸಿ ಉದ್ಘಾಟಿಸಿ, “ಇಂದಿನ ಸಮಾಜದಲ್ಲಿ ಯುವಕರು ಏಕ ಮನಸ್ಸಿನಿಂದ ಶ್ರಮ ವಹಿಸಿದರೆ ಏನು ಬೇಕಾದರೂ ಸಾಧಿಸಬಹುದೆಂದು” ಹೇಳುತ್ತಾ ಶುಭ ಹಾರೈಸಿದರು.
ಪ್ರಾಸ್ತಾವಿಕ ಮಾತುಗಳಿಂದ ಸ್ವಾಗತಿಸಿದ ಕರುಣಾಕರ ಎಣ್ಣೆಮಜಲುರವರು “ಊರ ನಾಗರಿಕರು ರಾಜಕೀಯ ಪಕ್ಷಬೇಧವಿಲ್ಲದೆ ಶ್ರಮಿಸಿದರೆ ನಮ್ಮಿಂದ ನಮ್ಮೂರು ಅತೀ ಸುಲಭವಾಗಿ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿದೆಯೆಂದು” ಹೇಳಿದರು.
ನಂತರ ಬಳ್ಪ ಎಡೋಣಿಯಿಂದ ಮೊಗ್ರ , ಮಲ್ಕಜೆ , ಕಿನ್ನಿಕುಮೇರಿ ಊರುಗಳಿಗೆ ರಸ್ತೆ ದುರಸ್ತಿ ಕಾರ್ಯವನ್ನು ಎರಡು ಜೆಸಿಬಿಗಳ ಮೂಲಕ ಹಮ್ಮಿಕೊಳ್ಳಲಾಯಿತು. ಊರಿನ ಸುಮಾರು 60 ಮಂದಿ ಶ್ರಮಾದಾನದಲ್ಲಿ ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!