
ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಹಿರಿಯ ಸಹಾಯಕ ಆಯುಕ್ತರಾಗಿ ಭಡ್ತಿ ಹೊಂದಿರುತ್ತಾರೆ. ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿಗಳು ಆಗಿರುವ ಜುಬಿನ್ ಮೊಹಪಾತ್ರ ರನ್ನು ಶ್ರೀ ದೇವಳದ ಆಡಳಿತ ಕಚೇರಿಯಲ್ಲಿ ಅಭಿನಂದಿಸಲಾಯಿತು. ಪದೋನ್ನತಿ ಹೊಂದಿದ ಅಧಿಕಾರಿಯನ್ನು ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಗೌರವಿಸಿದರು.
ಈ ಸಂದರ್ಭ ಶ್ರೀ ದೇವಳದ ಅಭಿಯಂತರ ಉದಯಕುಮಾರ್, ಹಿರಿಯ ಸಿಬ್ಬಂದಿ ಕೆ.ಎಂ.ಗೋಪಿನಾಥ್ ನಂಬೀಶ, ಸಿಬ್ಬಂದಿಗಳಾದ ನೋಣಪ್ಪ ಗೌಡ, ಅಶೋಕ್ ಉಪಸ್ಥಿತರಿದ್ದರು.