ಸುಳ್ಯ: ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ವತಿಯಿಂದ ಕೆವಿಜಿ ಸುಳ್ಯ ಹಬ್ಬ ಹಾಗೂ ಸಾಧನಾಶ್ರೀ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಮುಂಭಾಗದಲ್ಲಿ ಜರುಗಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಇದರ ಗೌರವ ಅಧ್ಯಕ್ಷರಾದ ಕೆ ವಿ ಚಿದಾನಂದರವರ ಅಧ್ಯಕ್ಷತೆಯಲ್ಲಿ ಜರುಗಿತು ಕಾರ್ಯಕ್ರಮದ ಉದ್ಘಾಟನೆಯನ್ನು ಕೆ .ವಿ ಚಿದಾನಂದ ನೆರವೇರಿಸಿದರು ಸುಳ್ಯದ ನಿರ್ಮಾತೃ ಶಿಕ್ಷಣ ಕ್ರಾಂತಿಯ ಹರಿಕಾರರಾದ ಕೆವಿಜಿಯರ ಸಂಸ್ಮರಣಾ ಮಾತುಗಳನ್ನು ಫ್ರೋ ಎಂ ಕೃಷ್ಣೇಗೌಡ ನೆರವೇರಿಸಿ ಮಾತನಾಡಿದರು. ಸಭಾ ವೇದಿಕೆಯಲ್ಲಿ ಪ್ರತಿ ವರ್ಷದಂತೆ ಸಾಧನಾಶ್ರೀ ಪ್ರಶಶ್ತಿಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಕೆ ಆರ್ ಗಂಗಾಧರ ಗೌಡ ಹಾಗೂ ಹಿರಿಯ ವೈಧ್ಯರಾದ ಡಾ.ಎಂ ವಿ ಶಂಕರ್ ಭಟ್ ಇವರಿಗೆ ಪ್ರದಾನ ಮಾಡಲಾಯಿತು . ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಾ ಶಿಕ್ಷಣ ಕ್ರಾಂತಿಯ ಹರಿಹಾಕರರ ಕುರಿತಾಗಿ ಮತನಾಡುತ್ತಾ ಸುಳ್ಯವನ್ನು ಮಂಗಳೂರಿನ ಮಾದರಿಯಲ್ಲಿ ಬೆಳೆಸುವಲ್ಲಿ ಓರ್ವ ಕೃಷಿಕರಾದ ಕೆವಿಜಿ ಸಾಧ್ಯವಾಗಿದೆ ಇಂದು ಕೆವಿಜಿ ಶಿಕ್ಷಣ ಸಂಸ್ಥೆಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನನೆ ಪಡೆದಿದೆ ಅಲ್ಲದೇ ಅವರ ಆಶೀರ್ವಾದದಿಂದ ಇಂದು ಜಿಲ್ಲೆ , ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳು ಬರುವಂತಾಗಿದೆ ಎಂದು ಹೇಳಿದರು . ಡಾ. ಎಂ .ವಿ ಶಂಕರ್ ಭಟ್ ಮಾತನಾಡುತ್ತಾ ಸುಳ್ಯದಲ್ಲಿ ಆಗಿನ ಕಾಲದಲ್ಲಿ ವೈಧ್ಯವೃತ್ತಿಯನ್ನು ಆರಂಭಿಸುವ ಸಂಧರ್ಭದಲ್ಲಿ ಬೆನ್ನು ತಟ್ಟಿ ಇಂದು ಮೆಡಿಕಲ್ ಕಾಲೇಜು ಸಹಿತ ಇತರೆ ಕಾಲೇಜುಗಳನ್ನು ಸ್ಥಾಪಿಸಿ ಟೆಕ್ನಾಲಜಿ ಬಳಸಿ ವೈಧ್ಯಕೀಯ ಕ್ಷೇತ್ರದಲ್ಲಿ ಬೆಂಗಳೂರು ಮಾದರಿಯಲ್ಲಿ ಚಿಕಿತ್ಸೆ ದೊರೆಯುವಂತಾಗಿದೆ ಎಂದು ಹೇಳಿದರು . ಇದೇ ಸಭಾ ವೇದಿಕೆಯಲ್ಲಿ ಯುವ ಸಾಧಕರುಗಳಾದ ಡಾ. ರವಿಕಾಂತ್ ಜಿ.ವಿ ವೈಧ್ಯಕೀಯ ಕ್ಷೇತ್ರ , ಅಶ್ರಫ್ ಕಮ್ಮಾಡಿ ಉದ್ಯಮ ಕ್ಷೇತ್ರ , ಕಸ್ತೂರಿ ಶಂಕರ್ ಸ್ವ ಉದ್ಯೋಗ ಕ್ಷೇತ್ರ , ಆದರ್ಶ್ ಎಸ್ ಪಿ ಕ್ರೀಡೆ , ಪ್ರಕಾಶ್ ಕುಮಾರ್ ಮುಳ್ಯ ಕೃಷಿ ಹಾಗೂ ಹೈನುಗಾರಿಕೆ ಕ್ಷೇತ್ರದಲ್ಲಿನ ಸಾಧನೆಗಾಗಿ ಸನ್ಮಾನಿಸಿ ಗೌರವಿಸಲಾಯಿತು ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ರವಿಕಾಂತ್ ಜಿ ವಿ ಇಂದು ಆರೋಗ್ಯ ಕ್ಷೇತ್ರದಲ್ಲಿ ಹೃದಯಿ ಸಂಭಂದಿಸಿದ ಕಾಯಿಲೆಗಳಿಗೆ ಬೆಂಗಳೂರು ಮಾದರಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯನ್ನು ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮಾಡುತ್ತಿದೆ ಹಾಗೂ ಇಲ್ಲಿ ಎಲ್ಲಾ ಮಾದರಿಯ ಕಾಲೇಜುಗಳ ಸ್ಥಾಪಿಸಿ ಉನ್ನತ ರೀತಿಯ ಚಿಕಿತ್ಸೆ ಸಿಗುವಂತೆ ಮಾಡುತ್ತಿದ್ದಾರೆ ಎಂದು ಹೇಳಿದರು . ಸಭಾ ವೇದಿಕೆಯಲ್ಲಿ ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಎನ್ ಎ ಜ್ಙಾನೇಶ್ , ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್ , ಶ್ರೀ ಕೃಷ್ಣ , ಡಾ.ಎಂ ಬಿ ಶಂಕರ್ ಭಟ್ , ಕೆ ಆರ್ ಗಂಗಾಧರ ಗೌಡ ಉಪಸ್ಥಿತರಿದ್ದರು . ರಾಜು ಪಂಡಿತ್ ಸ್ವಾಗತಿಸಿ ಲತಾಶ್ರೀ ಮೋಂಟಡ್ಕ ಮತ್ತು ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮ ನಿರೂಪಿಸಿದರು.