ಸುಳ್ಯ ಸೀಮೆಯ ಬಜಪ್ಪಿಲ ಶ್ರೀ ಇರುವೆರ್ ಉಳ್ಳಾಕುಲು ಧೂಮಾವತಿ ಹಾಗೂ ಉಪದೈವಗಳ ಕ್ಷೇತ್ರವು ಜೀರ್ಣೋದ್ಧಾರಗೊಂಡು ದ. 22 ರಂದು ಬೆಳಗ್ಗೆ 10-23 ರ ಕುಂಭ ಲಗ್ನದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ಹಾಗೂ ಬ್ರಹ್ಮಕಲಶಾಭಿಷೇಕವು ಕುಂಟಾರು ವೇ.ಮೂ. ಬ್ರಹ್ಮಶ್ರೀ ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬಜಪ್ಪಿಲ ಕ್ಷೇತ್ರ ವ್ಯಾಪ್ತಿಯ ಹಾಗೂ ತೊಡಿಕಾನ ಸೀಮೆಯ ಸಾವಿರಾರು ಭಕ್ತರು ಆಗಮಿಸಿ ಈ ಪುಣ್ಯ ಕಾರ್ಯವನ್ನು ಕಣ್ತುಂಬಿಕೊಂಡರು.
ಅಂತಃಕರಣ ಶುದ್ಧವಾಗಿದ್ದರೆ ದೈವಕೃಪೆ ಲಭಿಸುತ್ತದೆ : ಧರ್ಮಪಾಲನಾಥ ಸ್ವಾಮೀಜಿ
ಸುಳ್ಯ: ದೈವ, ದೇವರುಗಳ ಆರಾಧನೆಗೆ ಮಂತ್ರ, ತಂತ್ರಗಳ ಅಗತ್ಯ ಇಲ್ಲ. ಶುದ್ಧ ಅಂತಕರಣದಿಂದ ಅರಾಧನೆ ಮಾಡಿದರೆ ದೈವಕೃಪೆ ದೊರೆಯುತ್ತದೆ ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ನುಡಿದರು. ಅವರು ಮಂಡೆಕೋಲು ಗ್ರಾಮದ ಪೇರಾಲು ಶ್ರೀ ಬಜಪ್ಪಿಲ ಇರುವೆರ್ ಉಳ್ಳಾಕುಲು, ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಡಿ.21 ನಡೆದ
ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಇಂದು ಎಲ್ಲೆಡೆ ಮನಸ್ಸು ಸಂಕುಚಿತವಾಗಿದೆ. ಭಾವನೆಗಳು ಕಲುಷಿತವಾಗಿದೆ. ಈ ಬದುಕು ಕ್ಷಣಿಕವಾದುದು ಎಂದು ಗೊತ್ತಿದ್ದರೂ ಮನುಷ್ಯ ತಾನು ಶಾಶ್ವತ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾನೆ. ಈ ಶರೀರ ಭೋಗಸಾಧನೆಗಲ್ಲ, ಧರ್ಮ ಸಾಧನೆಗಾಗಿ ಎನ್ನುವುದೇ ಪರಮ ಸತ್ಯ. ಇದನ್ನರಿತು ಬದುಕಿದರೆ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದವರು ಹೇಳಿದರು. ಪೇರಾಲಿನಲ್ಲಿ ಶ್ರದ್ಧಾ ಭಕ್ತಿಯ ಸೇವೆ ಮತ್ತು ಅರ್ಪಣಾ ಮನೋಭಾವದಿಂದ ಭವ್ಯವಾದ ಕ್ಷೇತ್ರ ನಿರ್ಮಾಣವಾಗಿದೆ ಎಂದರು.
ಪೇರಾಲು ಶ್ರೀ ಬಜಪ್ಪಿಲ ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಹೇಮಂತಕುಮಾರ್ ಗೌಡರಮನೆ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ತಂತ್ರಿಗಳಾದ ಕುಂಟಾರು ರವೀಶ ತಂತ್ರಿಗಳು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ. ಕೆ. ವಿ. ಚಿದಾನಂದ ಗೌಡ, ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ತೊಡಿಕಾನ
ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ಮೇನಾಲ ಉಳ್ಳಾಕುಲು ದೈವಸ್ಥಾನದ ಮೊಕ್ತೇಸರ ಗುಡ್ಡಪ್ಪ ರೈ ಮೇನಾಲ , ಶ್ರೀಪಾದ ಕನ್ಸಲ್ಟನ್ಸಿ ಇಂಜಿನಿಯರ್ ಶ್ಯಾಮ್ ಪ್ರಸಾದ್ ಅಡ್ಡಂತಡ್ಕ ಭಾಗವಹಿಸಿದ್ದರು. ವೇದಿಕೆಯಲ್ಲಿ
ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಬಾಳೆಕೋಡಿ, ಸಂಚಾಲಕ ಜಯರಾಮ ಗೌಡರಮನೆ, ಆಡಳಿತ ಸಮಿತಿಯ ಕಾರ್ಯದರ್ಶಿ ಪ್ರವೀಣ್‌ಕುಮಾರ್ ಬಾಳೆಕೋಡಿ, ಕೋಶಾಧಿಕಾರಿ ಮೇದಪ್ಪ ಗೌಡ ಪೇರಾಲುಮೂಲೆ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಗಳಾದ ದಾಮೋದರ ಮಿತ್ತಪೇರಾಲು, ರಾಜಣ್ಣ ಪೇರಾಲುಮೂಲೆ, ದಿನೇಶ್ ಗಬ್ಬಲಡ್ಕ, ಅರ್ಚಕರಾದ ದಿನೇಶ್ ರೈ ಪೇರಾಲು ದರ್ಖಾಸು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು ಸ್ವಾಗತಿಸಿದರು, ಕಾರ್ಯದರ್ಶಿ ಮಂಜುನಾಥ್ ಪಿ. ಪೇರಾಲು ಕ್ಷೇತ್ರದ ಕುರಿತು ಮಾತನಾಡಿದರು. ಕೋಶಾಧಿಕಾರಿ ತೀರ್ಥೇಶ್ ಬಲಂದೋಟಿ ವಂದಿಸಿದರು. ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ‘ನೃತ್ಯ ಸಂಭ್ರಮ, ನಡೆಯಿತು.
ಧಾರ್ಮಿಕ ಕೇಂದ್ರಗಳು ಹಿಂದೂ ಧರ್ಮದ ಮಾನಬಿಂದುಗಳು : ಬಯಂಬು ಭಾಸ್ಕರ ರಾವ್
ಸುಳ್ಯ: ಧಾರ್ಮಿಕ ಕೇಂದ್ರಗಳು ಸನಾತನ ಧರ್ಮದ ಮಾನಬಿಂದುಗಳು. ಇಂದು ಸನಾತನ ಧರ್ಮದ ಪರ್ವಕಾಲ ಬಂದಿದೆ. ಸನಾತನ ಹಿಂದೂ ಧರ್ಮ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ಧರ್ಮ. ಹಿಂದೂ ಧರ್ಮ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ಅಂತಹ ಉದಾತ್ತ ಧರ್ಮವನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎಂದು ಅಜ್ಜಾವರ ಮಹಿಷ ಮರ್ಧಿನಿ ದೇವಸ್ಥಾನದ ಧರ್ಮದರ್ಶಿ ಬಯಂಬು ಭಾಸ್ಕರ ರಾವ್ ಹೇಳಿದರು.
ಅವರು ಪೇರಾಲು ಬಜಪ್ಪಿಲ ಇರುವೆರ್ ಉಳ್ಳಾಕುಲು ಮತ್ತು ಶ್ರೀ ಧೂಮಾವತಿ ಮತ್ತು ಪರಿವಾರ ದೈವಗಳ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ಹರಿಪ್ರಸಾದ್ ಬಾಳೆಕೋಡಿ ವಹಿಸಿದ್ದರು. ವೇದಿಕೆಯಲ್ಲಿ ಕರ್ಲಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದ ಮೊಕ್ತೇಸರ ಮುದ್ದಪ್ಪ ಗೌಡ, ಮುಚ್ಚಿರಡಿ ಉಳ್ಳಾಕುಲು ಕ್ಷೇತ್ರದ ಮೊಕ್ತೇಸರ ಕುಕ್ಕೇಟಿ ಲಕ್ಷ್ಮಣ ಗೌಡ, ಅತ್ಯಾಡಿ ಉಳ್ಳಾಕುಲು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ಲೋಕಯ್ಯ ಮಾಸ್ತರ್, ನಾರಾಲು ಉಳ್ಳಾಕುಲು ಚಾವಡಿ ಮುಖ್ಯಸ್ಥ ಶಾಂತಪ್ಪ ಗೌಡ ನಾರಾಲು, ಮುಳ್ಯ ಹತ್ತೊಕ್ಲು ಮುಖ್ಯಸ್ಥ ಹೊನ್ನಪ್ಪ ಗೌಡ ದೊಡ್ಡಮನೆ, ಕುಕ್ಕಂದೂರು ಕಿನಿಮಾನಿ ಪೂಮಾನಿ ದೈವಸ್ಥಾನದ ಮೊಕ್ತೇಸರ ಎನ್ ಎಸ್ ಬಾಲಕೃಷ್ಣ ಗೌಡ ನಡುಬೆಟ್ಟು, ಬೂಡು ಭಗವತಿ ಕ್ಷೇತ್ರ ಬಲ್ಲಾಳರ ಪ್ರತಿನಿಧಿ ಬೂಡು ರಾಧಾಕೃಷ್ಣ ರೈ,ಸುಳ್ಯ ಕಲ್ಕುಡ ದೈವಸ್ಥಾನ ಅಧ್ಯಕ್ಷ ಉಮೇಶ ಪಿ.ಕೆ, ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಅನುವಂಶಿಕ ಆಡಳಿತ ಮೊಕ್ತೇಸರರಾದ ಹೇಮಂತಕುಮಾರ್ ಗೌಡರಮನೆ, ಪ್ರಧಾನ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು ಕೋಶಾಧಿಕಾರಿ ಮೇದಪ್ಪ ಗೌಡ ಮೂಲೆಮನೆ, ಪ್ರವೀಣ್ ಕುಮಾರ್ ಬಾಳೆಕೋಡಿ, ಅರ್ಚಕ ದಿನೇಶ್ ರೈ ಪೇರಾಲು ದರ್ಖಾಸ್ತು, ಜಯರಾಮ ಗೌಡರಮನೆ, ರಾಜಣ್ಣ ಪೇರಾಲುಮೂಲೆ, ದಿನೇಶ್ ಗಬಲಡ್ಕ ಉಪಸ್ಥಿತರಿದ್ದರು.
ದಾಮೋದರ ಮಿತ್ತಪೇರಾಲು, ಸ್ವಾಗತಿಸಿದರು. ಕಾರ್ಯದರ್ಶಿ ಮಂಜುನಾಥ ರೈ ಪೇರಾಲು ಪ್ರಾಸ್ತಾವಿಕವಾಗಿ ಮಾತನಾಡಿ ತೀರ್ಥೇಶ್ ಬಲಂದೋಟಿ ವಂದಿಸಿದರು, ಅಚ್ಚುತ ಅಟ್ಲೂರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸ್ಥಳಿಯರಿಂದ ಸಾಂಸ್ಕೃತಿಕ ಸೌರಭ, ತುಳು ನಾಟಕ ಪ್ರದರ್ಶನಗೊಂಡಿತು.
.