ಸುಳ್ಯ: ಸುಳ್ಯ ತಾಲೂಕು ಸರಕಾರಿ ನೌಕರರ ಸಂಘಕ್ಕೆ ತಹಶೀಲ್ದಾರ್ ಮಂಜುಳಾ, ಶಿಕ್ಷಣ ಇಲಾಖೆಯ ಪೃಥ್ವಿಕುಮಾರ್ ಟಿ, ದೈ.ಶಿ.ಶಿಕ್ಷಕರಾದ ಸೂಫಿ ಪೆರಾಜೆ, ಯೂಸುಫ್ ಹಳೆಗೇಟು ಹಾಗೂ ಶಿಕ್ಷಕ ಚಂದ್ರಶೇಖರ ಪಿ.ಯವರನ್ನು ನಾಮ ನಿರ್ದೇಶನ ಮಾಡಿಕೊಳ್ಳಲಾಗಿದೆ ಎಂದು ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರು ಡಾ. ನಿತೀನ್ ಪ್ರಭು ತಿಳಿಸಿದ್ದಾರೆ. ತಹಶೀಲ್ದಾರ್ ಮಂಜುಳಾ ಅವರನ್ನು ಸಂಘದ ಗೌರವಾಧ್ಯಕ್ಷರಾಗಿಯೂ, ಕಾರ್ಯದರ್ಶಿಯಾಗಿ ಪೃಥ್ವಿ ಕುಮಾರ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 33 ನಿರ್ದೇಶಕರು ತಾಲೂಕು ಸಂಘಕ್ಕೆ ಆಯ್ಕೆಯಾಗಿದ್ದರು. ಇದೀಗ ಐದು ಮಂದಿಯನ್ನು ನಾಮ ನಿರ್ದೇಶನ ಮಾಡಲಾಗಿದ್ದು ಒಟ್ಟುನಿರ್ದೇಶಕರ ಸಂಖ್ಯೆ 38 ಆಗಿದೆ.ಹಿರಿಯ ಉಪಾಧ್ಯಕ್ಷರು ಸಹಿತ ಸಂಘದ ಎಲ್ಲ ಜವಾಬ್ದಾರಿಯನ್ನು ನಿರ್ದೇಶಕರುಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
- Thursday
- January 9th, 2025