ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಕಲ್ಲುಗುಂಡಿಯ ಮೇಲಿನ ಪೇಟೆಯಲ್ಲಿ ಡಿ 19 ರಂದು ನಡೆದಿದೆ.
ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ KA -6 d 9844 ಟ್ಯಾಕ್ಸಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಲ್ಲುಗುಂಡಿಯ ಮೇಲಿನ ಪೇಟೆಯ ಎಣ್ಣೆ ಮಿಲ್ಲಿನ ಸಮೀಪದ ಮರಕ್ಕೆ ಗುದ್ದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕಾರಿನ ಮುಂಭಾಗ ಕಖಂಗೊಂಡಿದೆ ಎಂದು ತಿಳಿದು ಬಂದಿದೆ.