ಸುಳ್ಯ ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವು ಡಿ. 17 ರಂದು ನಡೆಯಿತು. ಉದ್ಘಾಟನಾ ಸಮಾರಂಭದ ಸಭಾಧ್ಯಕ್ಷತೆ ಹಾಗೂ ಶಾಲಾ ಧ್ವಜಾರೋಹಣವನ್ನು ಸಂಸ್ಥೆಯ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ’ಸೋಜ ನೆರವೇರಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಕ್ರೀಡಾಕೂಟದ ಉದ್ಘಾಟನೆಯನ್ನು ಬಿ.ಕೆ ಮಾಧವ,ಕಬಡ್ಡಿ ಹಾಗೂ ಖೋ ಖೋ ಎನ್. ಐ. ಎಸ್ ತರಬೇತಿದಾರರು, ಕ್ರೀಡಾ ಜ್ಯೋತಿಯಿಂದ ದೀಪ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ವಿದ್ಯಾರ್ಥಿಗಳು ದಿನನಿತ್ಯ ದೈಹಿಕ ವ್ಯಾಯಾಮಗಳನ್ನು ಮಾಡುತ್ತಾ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಕ್ರೀಡೆಯಲ್ಲಿ ಸಾಧನೆ ಮಾಡಿ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿ ಎಂದು ಶುಭ ಹಾರೈಸಿದರು.
ಪ್ರೌಢ ಶಾಲಾ ಪೋಷಕ ಸಮಿತಿ ಉಪಾಧ್ಯಕ್ಷರಾದ ಹೇಮನಾಥ್ ಬಿ ಕೊಡಿಯಾಲಬೈಲ್ , ಕ್ರೀಡಾಕೂಟಕ್ಕೆ ಶುಭ ಕೋರಿದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಪೋಷಕರ ಸಮಿತಿಯ ಉಪಾಧ್ಯಕ್ಷರಾದ ಶಶಿಧರ ಎಂ ಜೆ, ಬೆಳ್ಳಿಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಅನುರಾಧ ಕುರುಂಜಿ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ , ಉಪಸ್ಥಿತರಿದ್ದರು . ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಣೀಯ ಪಥ ಸಂಚಲನ ಮೂಡಿ ಬಂತು. ಪ್ರೌಢಶಾಲಾ ಕ್ರೀಡಾ ಮಂತ್ರಿ ಖುಷಿ 8ನೇ, ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಪ್ರೌಢಶಾಲಾ ಕ್ರೀಡಾ ಮಂತ್ರಿ ಸಾರಿಕಾ 9ನೇ ಸ್ವಾಗತಿಸಿ, ಪ್ರಾಥಮಿಕ ಶಾಲಾ ಕ್ರೀಡಾ ಮಂತ್ರಿ ಪ್ರಿನ್ಸಿಟ ಲಿಯೋನ ಡಿ’ಸೋಜಾ 7ನೇ, ವಂದಿಸಿ, ಅನಿಂದ್ರಿತಾ ಹಾಗೂ ಚಿನ್ಮಯಿ ಶೆಟ್ಟಿ 9ನೇ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಬೆಳ್ಳಾರೆ, ಪುಷ್ಪವೇಣಿ ಹುದೇರಿ, ಉಮೇಶ್ ಪಂಜದಬೈಲು ಹಾಗೂ ಶಿಕ್ಷಕರು ಕ್ರೀಡಾಕೂಟದ ಯಶಸ್ವಿಗೆ ಸಹಕರಿಸಿದರು. ಸುಮಾರು 760 ವಿಜೇತ ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದರು.