ಆಯುಧ ಪರವಾನಿಗೆ ನವೀಕರಣ ದಿನಾಂಕ 31-12-2024 ರಂದು ಮುಕ್ತಾಯಗೊಳ್ಳುವ ಪರವಾನಿಗೆದಾರರು 2024 ಡಿಸೆಂಬರ್ 31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ತಾಲೂಕು ದಂಢನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಆಯುಧ ಪರವಾನಿಗೆಯನ್ನು ಹೊಂದಿರುವ ಪರವಾನಿಗೆದಾರರು ದಿನಾಂಕ : 31.12.2024 ರಂದು ನವೀಕರಣ ಮುಕ್ತಾಯಗೊಳ್ಳುವವರು ದಿನಾಂಕ : 31-12-2024 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿದ್ದು, ದಿನಾಂಕ : 01.01.2025 ರಿಂದ ಸ್ವಿಕೃತವಾದ ಅರ್ಜಿಗಳಿಗೆ ದಂಡನೆ ಪಾವತಿಸಿ ನವೀಕರಿಸಬೇಕಾಗಿರುವುದರಿಂದ 2024 ಡಿಸೆಂಬರ್ 31 ರ ಒಳಗಾಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವಂತೆ ಆಯುಧ ಪರವಾನಿಗೆದಾರರಿಗೆ ಪತ್ರಿಕಾ ಪ್ರಕಟಣೆಯಲ್ಲಿ
ಸುಳ್ಯ ತಹಶೀಲ್ದಾರ್ ಮಂಜುಳಾ ಎಂ ತಿಳಿಸಿದ್ದಾರೆ.
- Wednesday
- December 18th, 2024