Ad Widget

ಬಿಳಿನೆಲೆ ಕೈಕಂಬ ಶಾಲಾ ಮಕ್ಕಳಿಗೆ ಅನುಭವ ಮಂಟಪದ ಪಾಠ ಮಾಡಿದ ಸಿ.ಎಂ

. . . . . . . . .

ಸುಬ್ರಹ್ಮಣ್ಯ, ಡಿ.16: ಶಾಲಾ ಪ್ರವಾಸದ ಅಂಗವಾಗಿ ಬೆಳಗಾವಿ ಸುವರ್ಣಸೌಧಕ್ಕೆ ಭೇಟಿ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಬಿಳಿನೆಲೆ ಕೈಕಂಬ ಸರಕಾರಿ ಪ್ರಾಥಮಿಕ ಶಾಲೆಯ ಸಹಿತ ಇತರೆ ವಿದ್ಯಾರ್ಥಿಗಳಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಭವ ಮಂಟಪದ ಬಗ್ಗೆ ಪಾಠ ಮಾಡಿದರು.
ಬಿಳಿನೆಲೆ ಕೈಕಂಬ ಶಾಲೆಯಿಂದ ಶಾಲೆಯ ಸುಮಾರು 33 ಮಕ್ಕಳು ಶಾಲಾ ಪ್ರವಾಸ ಶಿಕ್ಷಕರೊಂದಿಗೆ ತೆರಳಿದ್ದರು. ಬೆಳಗಾವಿ ಸುವರ್ಣಸೌಧಕ್ಕೆ ಭೇಟಿ ನೀಡಿದ್ದ ಅವರು ಮೊದಲಿಗೆ ಸಭಾಪತಿ ಯು.ಟಿ.ಖಾದರ್ ಅವರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಶಾಲಾ ಮಕ್ಕಳು ನೋಡದೇ(ಬಾಯಿಪಾಠ) ಸಂವಿಧಾನ ಪೀಠಿಕೆಯನ್ನು ಯು.ಟಿ.ಖಾದರ್ ಎದುರು ವಾಚಿಸಿದರು. ಈ ಬಗ್ಗೆ ಮೆಚ್ಚುಗೆ ಸೂಚಿಸಿದ ಯು.ಟಿ.ಖಾದರ್ ಅವರು ಮಕ್ಕಳನ್ನು ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಮಾಡಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರೂ ಬಿಳಿನೆಲೆ ಕೈಕಂಬ ಶಾಲಾ ಮಕ್ಕಳು ನೋಡದೆ ಸಂವಿಧಾನ ಪೀಠಿಕೆ ವಾಚಿಸಿದರು. ಇದಕ್ಕೆ ಸಿಎಂ ಮೆಚ್ಚುಗೆ ಸೂಚಿಸಿ ಮಕ್ಕಳು ಹಾಗೂ ಶಿಕ್ಷಕರನ್ನು ಶ್ಲಾಘಿಸಿದರು. ಬಳಿಕ ಸಿದ್ದರಾಮಯ್ಯ ಅವರು ಬಿಳಿನೆಲೆ ಕೈಕಂಬ ಶಾಲಾ ಮಕ್ಕಳು ಸೇರಿದಂತೆ ಶಾಲಾ ಪ್ರವಾಸಕ್ಕೆ ಅಲ್ಲಿಗೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಹನ್ನೆರಡನೇಯ ಶತಮಾನದಲ್ಲಿಯೇ ಪ್ರಜಾಪ್ರಭುತ್ವ ಪರಿಕಲ್ಪನೆಯ ಮೇಲೆ ರೂಪುಗೊಂಡಿದ್ದ ಅನುಭವ ಮಂಟಪದ ಬಗ್ಗೆ ಅಲ್ಲಿದ್ದ ವಿವರಿಸಿದರು. ಬಿಳಿನೆಲೆ ಶಾಲಾ ಮುಖ್ಯ ಶಿಕ್ಷಕಿ ಪವಿತ್ರಾ, ಎಸ್‌ಡಿಎಂಸಿ ಅಧ್ಯಕ್ಷ ನವೀನ್, ಶಿಕ್ಷಕಿ ವನಿತಾ ಮತ್ತಿತರರು ಜತೆಗಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading