Ad Widget

ಅಮರ ಸುದ್ದಿ ವರದಿಗಾರನಿಗೆ ಜೀವ ಬೆದರಿಕೆ – ವಿಕಾಸ್ ಮೀನಗದ್ದೆ ವಿರುದ್ಧ ಪೋಲೀಸ್ ಹಾಗೂ ಬಿಎಸ್ ಎನ್ ಎಲ್ ಅಧಿಕಾರಿಗಳಿಗೆ ದೂರು

ಸುಳ್ಯ ಬಿಎಸ್‌ಎನ್ ಎಲ್ ಕಸ್ಟಮರ್ ಸರ್ವಿಸ್ ಸೆಂಟರ್‌ನ ವಿಕಾಸ್ ಮೀನಗದ್ದೆ ಎಂಬವರು ದೂರವಾಣಿ ಮೂಲಕ ಬೆದರಿಕೆ ಹಾಕಿದ್ದು, ಈ ಬಗ್ಗೆ ಅಮರ ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರ ಮಿಥುನ್ ಕರ್ಲಪ್ಪಾಡಿಯವರು ಡಿ. 14ರಂದು ಸುಳ್ಯ ಪೋಲೀಸರಿಗೆ ದೂರು ನೀಡಿದ್ದಾರೆ.

. . . . . . .

ಬಿಎಸ್‌ಎನ್‌ಎಲ್ ಕಸ್ಟಮರ್ ಸರ್ವಿಸ್ ಸೆಂಟರ್ ಸಂಸ್ಥೆಯು ಬಿ.ಎಸ್.ಎನ್.ಎಲ್ ಸಿಮ್‌ ಗೆ ಹೆಚ್ಚುವರಿ ಹಣ ಪಡೆದುಕೊಳ್ಳುತ್ತಿರುವ ಬಗ್ಗೆ ಯಾರೋ ಬಿಎಸ್‌ಎನ್‌ಎಲ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಡಿ.13ರಂದು ನನ್ನ ತಾಯಿಯ ಜತೆ ಬಿಎಸ್‌ಎನ್‌ಎಲ್ ಕಚೇರಿಗೆ ಹೋಗಿ ತಾಯಿಯ ಮೊಬೈಲ್ ಸಿಮ್ ಸರಿ ಪಡಿಸಿ ಬಂದಿದ್ದೆ.‌ ಇದನ್ನೇ ಗಮನಿಸಿ ಸಂಸ್ಥೆಯ ವಿಕಾಸ್‌ರವರು ಆ ದೂರು ಮಾಡಿರುವುದು ನಾನೇ ಎಂದು ತಿಳಿದು ನನ್ನ ಮಾವನ ಮೊಬೈಲ್‌ಗೆ ಫೋನ್ ಮಾಡಿ ನನಗೆ ಪಾಠ ಕಲಿಸುವುದಾಗಿ ಬೆದರಿಸಿದ್ದಾರೆ. ಡಿ.14ರಂದು ಬೆಳಗ್ಗೆ ನನ್ನ ಮೊಬೈಲ್‌ಗೆ ಫೋನ್ ಮಾಡಿ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ವಿಕಾಸ್ ಮೀನಗದ್ದೆಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಿಥುನ್ ಅವರು ಪೋಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಬೇರೆಯವರು ನೀಡಿದ ದೂರನ್ನು ನಾನೇ ದೂರು ನೀಡಿದ್ದು ಎಂದು ಆರೋಪಿಸಿ ಅವಾಚ್ಯ ಶಬ್ದಗಳ ನಿಂದನೆ ಮತ್ತು ಕೊಲೆ ಬೆದರಿಕೆ ಒಡ್ಡಿರುವ ಹಿನ್ನೆಲೆಯಲ್ಲಿ ಮಿಥುನ್ ರವರು ಬಿಎಸ್ ಎನ್ ಎಲ್ ಹಿರಿಯ ಅಧಿಕಾರಿಗಳಿಗೂ ದೂರು ನೀಡಲು ನಿರ್ಧರಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!