ಬೆಳ್ಳಾರೆ ಪ್ರಾ.ಕೃ.ಪ.ಸಹಕಾರಿ ಸಂಘದ ಆಡಳಿತ ಮಂಡಳಿಗೆ ಡಿ. 25ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಾದ ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ಸ್ಥಾನಕ್ಕೆ ಪದ್ಮನಾಭ ಶೆಟ್ಟಿ, ನಾರಾಯಣ ಕೊಂಡೆಪ್ಪಾಡಿ, ದಯಾಕರ ಆಳ್ವ, ಆರ್.ಕೆ. ಭಟ್ ಕುರುಂಬುಡೇಲು, ಸಾಯಿಪ್ರಸಾದ್ ರೈ, ಜನಾರ್ಧನ ಗೌಡ, ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಭಾಸ್ಕರ ನೆಟ್ಟಾರು, ಹಿಂದುಳಿದ ವರ್ಗ ಎ ಸ್ಥಾನಕ್ಕೆ ವಾಸುದೇವ ನಾಯಕ್, ಸಾಮಾನ್ಯ ಮಹಿಳಾ ಸ್ಥಾನಕ್ಕೆ ಭಾರತಿ ಕೊಚ್ಚಿ ಮತ್ತು ವನಿತಾ, ಪರಿಶಿಷ್ಟ ಪಂಗಡದ ಸ್ಥಾನಕ್ಕೆ ಸುಂದರ ನಾಗನಮಜಲು ಮತ್ತು ಪರಿಶಿಷ್ಟ ಜಾತಿಯ ಸ್ಥಾನಕ್ಕೆ ಬಿಯಾಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
- Tuesday
- January 7th, 2025