ಗುತ್ತಿಗಾರು:2015ರಲ್ಲಿ ಕೆವಿಜಿ ಪಾಲಿಟೆಕ್ನಿಕ್ ಸುಳ್ಯ ಇಲ್ಲಿ ಹುಟ್ಟಿಕೊಂಡ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್(ರಿ) ಸುಳ್ಯ ಎನ್.ಎಸ್.ಎಸ್ ಹಿರಿಯ ವಿದ್ಯಾರ್ಥಿಗಳ ಸಂಘ ಕರ್ನಾಟಕ ಇದರ ದಶಮಾನೋತ್ಸವದ ಅಂಗವಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇಲ್ಲಿಗೆ ವಿದ್ಯಾರ್ಥಿಗಳ ಕಲಿಕೆಗೆ ಸಹಾಯವಾಗುವ ನಿಟ್ಟಿನಲ್ಲಿ ನೀಡಿದ ಸ್ಮಾರ್ಟ್ ಕ್ಲಾಸ್ ಇದರ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಸ್ಮಾರ್ಟ್ ತರಗತಿಯ ಉದ್ಘಾಟನೆಯನ್ನು ಪುರುಷೋತ್ತಮ ಮಣಿಯಾನ ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನೆರವೇರಿಸಿದ್ದರು, ಕಾರ್ಯಕ್ರಮದಲ್ಲಿ ಬಾಲಕೃಷ್ಣ ಬೊಳ್ಳೂರು ಗೌರವ ಅಧ್ಯಕ್ಷರು ಸೇವಾ ಸಂಗಮ ಟ್ರಸ್ಟ್(ರಿ) ಸುಳ್ಯ,ಪಾಲಾಚಂದ್ರ.ವೈ ನಿರ್ದೆಶಕರು ಸೇವಾ ಸಂಗಮ ಟ್ರಸ್ಟ್ ಸುಳ್ಯ ಹಾಗೂ ನಿವೃತ್ತ ಉಪನ್ಯಾಸಕರು ಕೆವಿಜಿ ಪಾಲಿಟೆಕ್ನಿಕ್ ಸುಳ್ಯ,ಸೇವಾ ಸಂಗಮ ಟ್ರಸ್ಟ್ ಇದರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ರಕ್ಷಿತ್ ಬೊಳ್ಳೂರು ಹಾಗೂ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಪ್ರಾಂಶುಪಾಲರಾದ ಚೆನ್ನಮ್ಮ.ಪಿ, ಮುಖ್ಯೋಪಾಧ್ಯಾಯರಾದ ಪೂರ್ಣಿಮಾ.ಎಂ,ಸ್ಮಾರ್ಟ್ ತರಗತಿಯ ಅನುಷ್ಠಾನದಲ್ಲಿ ಮುತುವರ್ಜಿ ವಹಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಹಿರಿಯ ವಿದ್ಯಾರ್ಥಿ ಹಾಗೂ ಕೆವಿಜಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ ಸುಳ್ಯ ಇದರ ಉಪನ್ಯಾಸಕರಾದ ಸುಜಿತ್ ಮೊಗ್ರ, ಸೇವಾ ಸಂಗಮ ಟ್ರಸ್ಟ್(ರಿ)ಸುಳ್ಯ ಇದರ ಸದಸ್ಯರುಗಳು ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
- Thursday
- December 12th, 2024