ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ಇದರ ಆಶ್ರಯದಲ್ಲಿ ಕ. ಸಾ. ಪ ಸುಳ್ಯ ತಾಲೂಕು ಘಟಕ, ಪ್ರೆಸ್ ಕ್ಲಬ್ ಸುಳ್ಯ,ಮತ್ತು ಕಳಂಜ ಯುವಕ ಮಂಡಲ ಸಹಯೋಗದಲ್ಲಿ ನಡೆದ ಡಾl ಪುರುಷೋತ್ತಮ ಬಿಳಿಮಲೆಯವರ ಕೃತಿ “ಹುಡುಕಾಟ ” ಅನಾವರಣ ಹಾಗೂ ಸಂವಾದ ಕಾರ್ಯಕ್ರಮವು ತಂಟೆಪ್ಪಾಡಿಯ ಪ್ರಶಾಂತ ಪರಿಸರದ ಸುಂದರ “ನಿನಾದ” ಕೇಂದ್ರದ ವೇದಿಕೆಯಲ್ಲಿ ಡಿ 7 ರಂದು ನೆರವೇರಿತು.
ವೇದಿಕೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಡಾl ಬಿಳಿಮಲೆಯವರು ನಡೆದ ಸಂವಾದ ಕಾರ್ಯಕ್ರಮದಲ್ಲಿ ಆಗಮಿಸಿದ ಗಣ್ಯ ವ್ಯಕ್ತಿಗಳೊಂದಿಗೆ ತಮ್ಮ ಕಾರ್ಯ ಕ್ಷೇತ್ರದ ಹಾಗೂ ಕನ್ನಡ ಭಾಷೆ ನಾಡು, ನುಡಿ, ಜಲ, ಇತಿಹಾಸ, ಪುರಾಣ ಹಾಗೂ ಸಂಪ್ರದಾಯಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ಪ್ರಶ್ನೆ ಗಳಿಗೆ ಸಮಂಜಸ ವಾದ ಉತ್ತರ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು “ನಿನಾದ” ಕೇಂದ್ರದ ಅಧ್ಯಕ್ಷ ಪಿ ಐತ್ತಪ್ಪ ಶೆಟ್ಟಿ ವಹಿಸಿಕೊಂಡಿದ್ದರು ಈ ಕಾರ್ಯಕ್ರಮದ್ದಲ್ಲಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಬೆಂಗಳೂರಿನ ಚಿರಂತ್” ಪ್ರಕಾಶನದ ಪರಮೇಶ್ವರ್ ಹೆಚ್, ಕ. ಸಾ. ಪ ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ಸುಳ್ಯ ಪ್ರೆಸ್ ಕ್ಲಬ್ ನ ಅಧ್ಯಕ್ಷ ಹರೀಶ್ ಬಂಟ್ವಾಳ, ಕಳಂಜ ಯುವಕ ಮಂಡಲದ ಅಧ್ಯಕ್ಷ ಗಂಗಾಧರ ತೋಟದ ಮೂಲೆ ಇದ್ದರು.
ನಿನಾದ ಕೇಂದ್ರದ ರೂವಾರಿ ವಸಂತ ಶೆಟ್ಟಿಯವರು ತಮ್ಮ ಸ್ವಾಗತ ಭಾಷಣದ್ದಲ್ಲಿ ತಮ್ಮ ಹಾಗೂ ಬಿಳಿಮಲೆಯವರ ಹಲವು ವರ್ಷಗಳ ಸ್ನೇಹ ಸಂಬಂಧವನ್ನು ನೆನಪಿಸಿಕೊಂಡರು. ಕಾರ್ಯಕ್ರಮದ ನಿರೂಪಣೆ ಹರೀಶ್ ಬಂಟ್ವಾಳ ನಿರ್ವಹಿಸಿದರು, ಕೊನೆಯಲ್ಲಿ ನಿವೃತ್ತ ಪ್ರಾoಶುಪಾಲ ರಾಮಕೃಷ್ಣ ಭಟ್ ಚೂoತಾರು ವಂದಿಸಿದರು
ಈ ಸಂವಾದ ಕಾರ್ಯಕ್ರಮ ದ್ದಲಿ ಹಲವಾರು ಸಾಹಿತಿಗಳು, ವಿದ್ವಾಂಸರು, ಕವಿಗಳು, ಉದ್ಯಮಿಗಳು ಹಾಗೂ ಇನ್ನಿತ್ತರ ಗಣ್ಯರು ಆಗಮಿಸಿದ್ದರು