ಸುಳ್ಯದ ಐವರ್ನಾಡು ಗ್ರಾಮದ ಪ್ರಗತಿಪರ ಕೃಷಿಕರಾದ ನವೀನ್ ಚಾತುಬಾಯಿಯವರಿಗೆ ನಿಟ್ಟೆ ವಿಶ್ವವಿದ್ಯಾಲಯದ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದಿಂದ 2024ನೇ ವರ್ಷದ “ಗುಡ್ ಅಕ್ವಾಟಿಕ್ ಸ್ಟೀವರ್ಡ್ ಶಿಪ್ ಪ್ರಾಕ್ಟೀಸ್” ಪುರಸ್ಕಾರ ನೀಡಿ ಗೌರವಿಸಲಾಗಿದೆ.
ನ. 25ರಂದು ಮಂಗಳೂರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ. ಅನಿರ್ವನ್ ಚಕ್ರವರ್ತಿ ಮತ್ತು ಪ್ರೊ.ಡಾ. ಅಖಿಲಾರವರು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಚಾತುಬಾಯಿ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ಈ ಪುರಸ್ಕಾರ ನೀಡಿ ಗೌರವಿಸಿದರು.
ನವೀನ್ ರವರ ವಿಶಿಷ್ಟವಾದ ಮುತ್ತು ಕೃಷಿ ಹಾಗೂ ಸಮಗ್ರ ಕೃಷಿಗಳನ್ನು ಪರಿಗಣಿಸಿ ಈ ಪುರಸ್ಕಾರವನ್ನು ನೀಡಲಾಗಿದೆ.
- Thursday
- December 12th, 2024