ಸಹಕಾರ ಸಂಸ್ಕೃತಿಯಿಂದಾಗಿ ಬ್ಯಾಂಕಿಂಗ್ ಕ್ಷೇತ್ರ ಅಭಿವೃದ್ಧಿ ಗೊಂಡಿದೆ – ಕ್ಯಾಪ್ಟನ್ ಬೃಜೇಶ್.
ದೀನದಯಾಳು ಸಹಕಾರ ಸಂಘದ ಮೂಲಕ ಬಡವರ ದೀನದಲಿತರ ಅಭಿವೃದ್ಧಿಯಾಗಲಿ – ಮುರುಳ್ಯ.
ಸುಳ್ಯದ ರಥಬೀದಿಯಲ್ಲಿರುವ ಟಿ.ಎ.ಪಿ.ಸಿ.ಎಂ.ಎಸ್. ಕಟ್ಟಡದಲ್ಲಿ ಮಾಜಿ ಸಚಿವ ಎಸ್.ಅಂಗಾರ ನೇತೃತ್ವದ ಪಂಡಿತ್ ದೀನದಯಾಳ್ ಸಹಕಾರ ಸಂಘ ಶುಭಾರಂಭಗೊಂಡಿತು.
ಬೆಳಿಗ್ಗೆ 11.22 ರ ಕುಂಭಲಗ್ನದಲ್ಲಿ ಸಹಕಾರ ಸಂಘವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುಳ್ಯ ತಾಲೂಕು ಸಂಘಚಾಲಕರಾದ ಚಂದ್ರಶೇಖರ ತಳೂರು ರಿಬ್ಬನ್ ಬಿಡಿಸುವುದರ ಮೂಲಕ ಹಾಗೂ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ನಿತ್ಯಾನಂದ ಮುಂಡೋಡಿಯವರು ದೀಪ ಬೆಳಗಿಸುವ ಮೂಲಕ ಕಛೇರಿಗಳನ್ನಹ ಉದ್ಘಾಟಿಸಿದರು.
ಬಳಿಕ ದುರ್ಗಾಪರಮೇಶ್ವರಿ ಕಲಾಮಂದಿರ ಕೇರ್ಪಳದಲ್ಲಿ ನಡೆದ ಸಭಾಕಾರ್ಯಕ್ರಮವನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸಿದರು. ಉದ್ಘಾಟಕರ ಮಾತುಗಳನ್ನಾಡುತ್ತಾ ದ.ಕ.ಜಿಲ್ಲೆಯಲ್ಲಿರು ಸಹಕಾರ ಸಂಸ್ಕೃತಿಯಿಂದಾಗಿ ಇಲ್ಲಿ ಬ್ಯಾಂಕಿಂಗ್ ಕ್ಷೇತ್ರ ಯಶಸ್ವಿಯಾಗಿದೆ. ಎಸ್.ಅಂಗಾರರವರು ಮೂರು ದಶಕಗಳ ಕಾಲ ಶಾಸಕರಾಗಿದ್ದು ಬಳಿಕ ಸಚಿವರಾಗಿ ಕೆಲಸ ನಿರ್ವಹಿಸಿ ಅನುಭವ ಪಡೆದು ಅವರ ಸಾಮಾಜಿಕ ಅಪಾರ ಅನುಭವವನ್ನು ಧಾರೆ ಎರೆದು ಸಹಕಾರ ಸಂಘವನ್ನು ಕಟ್ಟತೊಡಗಿದ್ದಾರೆ ಈ ಸಹಕಾರ ಸಂಘದ ಮೂಲಕ ಸರಕಾರದ ಯೋಜನೆಗಳನ್ನೂ ಜಾರಿಗೊಳಿಸುವಂತಾಗಬೇಕು ಕೇಂದ್ರ ಸರಕಾರದ ಸೂರ್ಯ ಗರ್ ಬಿಜಿಲಿ ಯೋಜನೆಯನ್ನು ನೀಡುವಲ್ಲಿ ಪ್ರಯತ್ನವನ್ನು ಪಡೆದು ಸಂಘ ಮತ್ತು ಜನತೆಗೆ ಇನ್ನಷ್ಟು ಹತ್ತಿರವಾಗುವಂತೆ ಅವರು ಹೇಳಿದರು.
ಶಾಸಕಿ ಭಾಗೀರಥಿ ಮುರುಳ್ಯ, ಮಾತನಾಡುತ್ತಾ ಇದೀಗ ನೂತನವಾಗಿ ಸಹಕಾರ ಸಂಘವು ದೀನದಯಾಳುರವರವ ಹೆಸರಿನಲ್ಲಿ ಮಾಜಿ ಸಚಿವರ ಮುಂದಾಳತ್ವದಲ್ಲಿ ಉದ್ಘಾಟನೆ ಗೊಂಡಿದ್ದು ಇದರಲ್ಲಿ ಸಾಲ ಸೌಲಭ್ಯಗಳು ಮತ್ತು ಅಭಿವೃದ್ಧಿಗಾಗಿ ಎಲ್ಲಾ ನೆರವುಗಳನ್ನು ಪಡೆದುಕೊಂಡು ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಬೇಕು ಅದರ ಮೂಲಕ ಸಂಘ ಮತ್ತು ಬಡವರ ದೀನದಲಿತರ ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು. ಸಭಾ ವೇದಿಕೆಯಲ್ಲಿ ಟಿ.ಎ.ಪಿ.ಸಿ.ಎಂಎಸ್. ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಮಾಜಿ ಎಂಎಲ್.ಸಿ. ಅಣ್ಣಾ ವಿನಯಚಂದ್ರ, ಟಿ.ಎ.ಪಿ.ಸಿ.ಎಂ.ಎಸ್. ಸಿ.ಇ.ಒ. ಜಯರಾಮ ದೇರಪ್ಪಜ್ಜನಮನೆ, ಎ.ಆರ್ ಡಾ.. ರಘು, ಚಂದ್ರಶೇಖರ ತಳೂರು, ಆರೆಸ್ಸೆಸ್ ಮುಖಂಡ ನ.ಸೀತಾರಾಮ, ಬಿ.ಜೆ.ಪಿ.ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಲೆಕ್ಕ ಪರಿಶೋಧಕರಾದ ಶ್ರೀಪತಿ ಭಟ್, ರಾಜ್ಯ ಮೊಗೇರ ಸಂಘದ ಅಧ್ಯಕ್ಷ ನಂದರಾಜ್ ಸಂಕೇಶ, ಮುಖ್ಯ ಅತಿಥಿಗಳಾಗಿದ್ದರು.
ಸಹಕಾರ ಸಂಘದ ನಿರ್ದೇಶಕರಾದ ಜಗನ್ನಾಥ ಜಯನಗರ ಸ್ವಾಗತಿಸಿ, ಸೋಮಶೇಖರ ಹಾಸನಡ್ಕ ವಂದಿಸಿದರು. ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ವೇದಾವತಿ ಅಂಗಾರ, ಹರಿಶ್ಚಂದ್ರ ಹಾಸನಡ್ಕ, ಎಸ್.ಕೃಷ್ಣ, ಸಂದೀಪ್ ಪಂಜೋಡಿ, ಶುಭಲತಾ ಮಾತ್ರಮಜಲು, ಬಾಳಪ್ಪ ಕಿಲಂಗೋಡಿ, ಕುಂಞ ಕಮಿತ್ತಿಲು, ಉಮೇಶ್ ಕೆಳಗಿನಬೀಡು, ರವಿ ಕೆಳಗಿನಬೀಡು ಪ್ರಮುಖರಾದ ಎ ವಿ ತೀರ್ಥರಾಮ , ಹರೀಶ್ ಕಂಜಿಪಿಲಿ , ಸಿ ಎ ಬ್ಯಾಂಕ್ ಕಾರ್ಯನಿರ್ವಾಹ ಅಧಿಕಾರಿ ಸುದರ್ಶನ್ ಸೂರ್ತಿಲ , ಉಪಸ್ಥಿತರಿದ್ದರು.