ಸುಳ್ಯ ನೆಹರು ಮೆಮೋರಿಯಲ್ ಪ.ಪೂ ಕಾಲೇಜಿನ ವಾರ್ಷಿಕ ಕ್ರೀಡಾ ಕೂಟ ಡಿ 6ರಂದು ನಡೆಯಿತು. ಧ್ವಜಾರೋಹಣವನ್ನು ಪ್ರಾoಶುಪಾಲರಾದ ಮಿಥಾಲಿ ಪಿ ರೈ ಅವರು ನೆರವೇರಿಸಿದರು.,ಪದವಿ ವಿಭಾಗದ ದೈ. ಶಿ ನಿರ್ದೇಶಕರಾದ ಲೆ ಸೀತಾರಾಮ ಎಂ ಡಿ, ಕ್ರೀಡಾ ಜ್ಯೋತಿ ಸ್ವೀಕರಿಸಿದರು.ವಿದ್ಯಾರ್ಥಿ ಕ್ಷೇಮಾಧಿಕಾರಿ ವಿನಯ್ ನಿಡ್ಯಮಲೆ ಉಪಸ್ಥಿತರಿದ್ದರು.ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಯ ದೈ ಶಿ ನಿರ್ದೇಶಕ ಮಿಥನ್,ಕೆವಿಜಿ ಆಯುರ್ವೇದ ಕಾಲೇಜು &ಮಹಾ ವಿದ್ಯಾಲಯದ ದೈ ಶಿ ನಿರ್ದೇಶಕ ನಾಗರಾಜ್ ನಾಯ್ಕ್ ಭಟ್ಕಳ, ಸಹಕರಿಸಿದರು.ಕ್ರೀಡಾ ಕಾರ್ಯದರ್ಶಿ ಮಣಿಕಂಠ ಪ್ರತಿಜ್ಞಾ ವಿಧಿ ಬೋಧಿಸಿ,ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ ಬಿ ಸ್ವಾಗತಿಸಿ, ನಿರೂಪಿಸಿದರು.ಜೀವಿತ್ ಕುಮಾರ್ ಎಂ ಜೆ ಬಳಗ ಪ್ರಾರ್ಥಿಸಿದರು.ಕ್ರೀಡಾ ಪಟುಗಳಾದ ಮಣಿಕಂಠ,ಹಂಝತುಲ್ ಕರಾರ್,ಚಿಂತನ್,ಅಬುಬಕ್ಕರ್ ಹನೀನ್, ಮೋನಿಕಾ ಕ್ರೀಡಾ ಜ್ಯೋತಿ ತಂಡದಲ್ಲಿದ್ದರು.ಪಂದ್ಯಾಟದಲ್ಲಿ ಪ್ರಾಚಾರ್ಯರಾದ ಮಿಥಾಲಿ ಪಿ ರೈ ಅವರು ವೀಕ್ಷಕ ವಿವರಣೆ ನೀಡಿದರು.ಕ್ರೀಡಾ ಕೂಟಕ್ಕೆ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಚಂದ್ರಶೇಖರ ಪೇರಾಲು ಅವರು ಆಗಮಿಸಿ ಶುಭ ಹಾರೈಸಿದರು.ಬೋಧಕ ಬೋಧಕೇತರ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- Thursday
- December 12th, 2024