Ad Widget

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ

. . . . . . . . .

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಸುಬ್ರಹ್ಮಣ್ಯದಲ್ಲಿ ಜಾತ್ರೋತ್ಸವದ ಪ್ರಧಾನ ದಿನಗಳಾದ ಪಂಚಮಿ ಮತ್ತು ಷಷ್ಠಿಯಂದು ವಾಹನ ನಿಲ್ದಾಣ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ. ಉತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಾಹನಗಳಿಗೆ ಡಿ.6 ಮತ್ತು 7 ರಂದು ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. .

. . . . . . .

ಆದುದರಿಂದ ಸಾರ್ವಜನಿಕರು ಮತ್ತು ಭಕ್ತರು ಸಹಕರಿಸಬೇಕು ಎಂದು ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್.ಕೆ ತಿಳಿಸಿದ್ದಾರೆ.

ರಸ್ತೆ ಬದಿ ಪಾರ್ಕಿಂಗ್ ಇಲ್ಲ: ಡಿ.6 ರಂದು ಸಂಜೆ 4 ಗಂಟೆಯಿಂದ ಎಲ್ಲಾ ವಾಹನಗಳು ನಿಗದಿ ಪಡಿಸಿದ ಪಾರ್ಕಿಂಗ್ ಸ್ಥಳದಲ್ಲೇ ನಿಲುಗಡೆಗೊಳಿಸಬೇಕು. ವಸತಿ ಗೃಹದಲ್ಲಿ ಕೊಠಡಿ ಕಾಯ್ದಿರಿಸಿದವರು 4 ಗಂಟೆಯ ಒಳಗೆ ನಿಗದಿ ಪಡಿಸಿದ ವಸತಿಗೃಹಗಳಿಗೆ ತೆರಳಬೇಕು. ಅಲ್ಲದೆ ತುರ್ತು ಸಂದರ್ಭ ಹೊರತು ಪಡಿಸಿ ಸರ್ವರಿಗೂ ಈ ನಿಯಮಗಳು ಅನ್ವಯವಾಗಲಿದೆ. ಅಲ್ಲದೆ ಕುಮಾರಧಾರದಿಂದ ಸವಾರಿ ಮಂಟಪದ ತನಕ ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ

ನಿಲ್ದಾಣ ಮಾರ್ಗಸೂಚಿ:

ಕುಮಾರಧಾರದಿಂದ ಸವಾರಿ ಮಂಟಪದ ತನಕ ರಸ್ತೆ ಬದಿ ಪಾರ್ಕಿಂಗ್‌ಗೆ ಅವಕಾಶವಿಲ್ಲ. ಗುಂಡ್ಯ, ಉಪ್ಪಿನಂಗಡಿ, ಪುತ್ತೂರು, ಕಡೆಯಿಂದ ಬರುವ ಘನ ವಾಹನಗಳು ಕುಮಾರಧಾರ ಪಾರ್ಕಿಂಗ್ ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗಿದೆ. ಲಘು ವಾಹನಗಳಿಗೆ ಕುಮಾರಧಾರ ಹೆಲಿಪ್ಯಾಡ್ ಮತ್ತು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ೩ ಮಂಗಳೂರು, ಪುತ್ತೂರು, ಧರ್ಮಸ್ಥಳ,ಬೆಂಗಳೂರು ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಸುಬ್ರಹ್ಮಣ್ಯದ ವಲ್ಲೀಶ ಸಭಾ ಭವನದ ಬಳಿ, ದ್ವಿಚಕ್ರ ವಾಹನಗಳಿಗೆ ಪದವಿ ಕಾಲೇಜು ಮೈದಾನ ಮತ್ತು ಬಿಲದ್ವಾರದ ಎದುರಿನ ಮೈದಾನಗಳನ್ನು ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಸ್ಥಳೀಯರು ದಾಖಲಾತಿ ತೋರಿಸಿ:

ಸುಳ್ಯ ಕಡೆಯಿಂದ ಬರುವ ಕೆ.ಎಸ್.ಆರ್.ಟಿ.ಸಿ ಬಸ್ ಗಳು ಇಂಜಾಡಿ ಫಾರೆಸ್ಟ್ ವಸತಿ ಗೃಹದ ಬಳಿ ವ್ಯವಸ್ಥೆ ಮಾಡಲಾಗಿದೆ. ಇಂಜಾಡಿ ಬಳಿ ನೂತನವಾಗಿ ನಿರ್ಮಿತವಾದ ಪಾರ್ಕಿಂಗ್ ಸ್ಥಳದಲ್ಲಿ ದ್ವಿಚಕ್ರ ವಾಹನಗಳು ಮತ್ತು ಲಘು ವಾಹನಗಳು ಸವಾರಿ ಮಂಟಪದ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆಗೊಳಿಸಬೇಕು.ಐನೆಕಿದು,ಹರಿಹರ, ಕೊಲ್ಲಮೊಗ್ರ ,ಬಾಳುಗೋಡು ಕಡೆಗೆ ಹೋಗುವ ಸ್ಥಳಿಯ ನಿವಾಸಿಗಳಿಗೆ ಸ್ಥಳೀಯ ದಾಖಲಾತಿಯನ್ನು ತೋರಿಸಿದ್ದಲ್ಲಿ ಬೈಪಾಸ್‌ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು.

ಸಿಸಿ ಕ್ಯಾಮರಾ ಅಳವಡಿಕೆ ಅಟೋ ರಿಕ್ಷಾ ಚಾಲಕರು ಪ್ರಯಾಣಿಕರನ್ನು ಕುಮಾರಧಾರದಿಂದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಎದುರಿನ ತನಕ ಸಾಗಾಟ ಮಾಡಬಹುದಾಗಿದೆ. ಜಾತ್ರೋತ್ಸವಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ಅವರ ಸುರಕ್ಷತಾ ದೃಷ್ಠಿಯಿಂದ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷ ವಾಹನ ನಿಲ್ದಾಣ ವ್ಯವಸ್ಥೆ ಆಯೋಜನೆ ಮಾಡುವ ಮೂಲಕ ಕ್ಷೇತ್ರದಲ್ಲಿ ಜಾತ್ರಾ ವೇಳೆ ವಾಹನ ದಟ್ಟಣೆ ಅಧಿಕವಾಗದಂತೆ ಕ್ರಮ ಕೈಗೊಳ್ಳಲಾಗಿದೆ.ಪಾರ್ಕಿಂಗ್ ಸ್ಥಳಗಳಲ್ಲಿ ಮತ್ತು ಆಯಕಟ್ಟಿನ ಜಾಗಗಳು ಸೇರಿದಂತೆ ಕ್ಷೇತ್ರದ ಇತರ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ ಎಂದು ಎಸ್‌ಐ ಕಾರ್ತಿಕ್.ಕೆ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading