ನಿನ್ನೆ ಸಂಜೆ ಸುರಿದ ಗಾಳಿ ಮಳೆಗೆ ಪೆರಾಜೆಯ ಜಂಕ್ಷನ್ ನಲ್ಲಿ ಕಳೆದ ವರ್ಷ ನಿರ್ಮಿಸಿದ ಆಟೋ ನಿಲ್ದಾಣಕ್ಕೆ ಹಾನಿಯಾಗಿದೆ.
ಇದರಿಂದ ಆಟೋ ನಿಲ್ದಾಣದಲ್ಲಿ ನಿಲ್ಲಿಸಬೇಕಾದ ರಿಕ್ಷಾಗಳನ್ನು ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡುವಂತಾಗಿದೆ.
ಕಳೆದ ವರ್ಷ ಪಂಚಾಯತ್ ವತಿಯಿಂದ ಅಂದಾಜು ಸುಮಾರು 80 ಸಾವಿರ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ನಿಲ್ದಾಣ ಒಂದು ವರ್ಷಕ್ಕೆ ಮುರಿದು ಹೋಗಿರುವುದರಿಂದ ಆಟೋ ಚಾಲಕರು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿ ನಿಲ್ದಾಣ ನಿರ್ಮಿಸುತ್ತಿದ್ದಲ್ಲಿ ಇಂತಹ ಸಣ್ಣ ಮಳೆಗೆ ಬೀಳುವ ಸಾಧ್ಯತೆ ಇಲ್ಲವಾಗಿತ್ತು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.