Ad Widget

ಸುಳ್ಯ : ಕೆ.ವಿ.ಜಿ.ಆಯುರ್ವೇದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಸಂಘದ ರಚನೆ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ

. . . . .

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ವಿದ್ಯಾರ್ಥಿ ಸಂಘದ ರಚನೆ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವನ್ನು ನ.29ರಂದು ಕಾಲೇಜಿನ ಆಡಿಟೋರಿಯಂನಲ್ಲಿ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಅವರು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ, 1996 ರಿಂದ ಕಾಲೇಜು ಪ್ರಾರಂಭಗೊಂಡು ಇಲ್ಲಿಯ ತನಕ ನಡೆದು ಬಂದ ದಾರಿ ಮತ್ತು ಅದಕ್ಕಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪಟ್ಟ ಪರಿಶ್ರಮ ದ ಬಗ್ಗೆ ಎಲ್ಲರಿಗೆ ಮನಮುಟ್ಟುವಂತೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ನೀಲಾಂಬಿಕೈ ನಟರಾಜನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ಒಕ್ಕೂಟ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿಗಳ ನಡುವಿನ ಒಗ್ಗಟ್ಟು ಮತ್ತು ಅದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ
ವೇದಿಕೆಯಲ್ಲಿ ಉಪಸ್ಥಿತರಿದ್ದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಕೌಂನ್ಸಿಲ್ ಮೆಂಬರ್ ಶ್ರೀ. ಜಗದೀಶ್ ಅಡ್ತಲೆ, ಎಡ್ವೈಸರ್ ಪ್ರೊ.ದಾಮೋದರ ಗೌಡ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ., 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ನಾಯಕಿ ಡಾ. ಅನುಷ ಮಡಪ್ಪಾಡಿ, ವಿದ್ಯಾರ್ಥಿ ನಾಯಕ ಮಿ.ಶೀತಲ್ ಗೌಡ, ವಿದ್ಯಾರ್ಥಿನಿ ನಾಯಕಿ ಕು. ನಿತ್ಯಾ ದಾಸ್, ಕಾರ್ಯದರ್ಶಿ ಕು. ಲಕ್ಷ್ಮಿ ಸುರೇಶ್
ಕಲಿಕಾ ವೈದ್ಯರುಗಳ ನಾಯಕ
ಡಾ.ಆರ್ತಿಕ್ ಕೆ.ಎಸ್.,
ನಾಯಕಿ ಡಾ. ಸ್ನೇಹ ಕೆ., ಉಪಸ್ಥಿತರಿದ್ದರು

ವಿಧ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಗಳಾದ ಡಾ. ಹರ್ಷಿತ ಪುರುಷೋತ್ತಮ್ ಇವರು 2024-25ನೇ ಸಾಲಿನ
ನೂತನ ವಿದ್ಯಾರ್ಥಿ ಸಂಘವನ್ನು ಸಭೆಗೆ ಪರಿಚಯಿಸಿ ಅವರಿಗೆ ವಿದ್ಯಾರ್ಥಿ ಮಂಡಲದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಕಾಲೇಜಿನ ದ್ರವ್ಯಗುಣ ವಿಭಾಗದ ಪ್ರೊಫೆಸರ್ ಡಾ. ಕವಿತ ಬಿ.ಎಂ ಇವರು ಎಲ್ಲರನ್ನೂ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕು. ಚಿತ್ಕಲ ಭಾರದ್ವಾಜ್ ಮತ್ತು ಕು. ಅಶ್ವಿನಿ ಯವರು ಪ್ರಾರ್ಥನೆಯೊಂದಿಗೆ ಆರಂಭಿಸಿದರು.

ಈ ಸಂದರ್ಭದಲ್ಲಿ ನೂತನ ವಿದ್ಯಾರ್ಥಿ ಸಂಘದ ವಿದ್ಯಾರ್ಥಿ ಪ್ರತಿನಿಧಿ ಶೀತಲ್ ಗೌಡ ಇವರು ವಿದ್ಯಾರ್ಥಿ ವೃಂದದ ಹಿತವನ್ನು ಕಾಪಾಡಿಕೊಂಡು ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾಲೇಜಿನಲ್ಲಿ ತ್ರೈಮಾಸಿಕ ಪತ್ರಿಕೆ ಆಯುರ್ ನ್ಯೂಸ್ ನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಚಿದಾನಂದ ಕೆ‌ ವಿ ರವರು ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಪ್ರತಿನಿಧಿ ಡಾ. ಅನುಷ ಮಡಪ್ಪಾಡಿ ಇವರು ವಂದಿಸಿದರು. ಕಲಿಕಾ ವೈದ್ಯರುಗಳಾದ ಡಾ.ಕೃತಿಕಾ ಹಾಗೂ ಡಾ.ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!