ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನಾ ಸಮಾರಂಭಕ್ಕೆ ಭಾಗವಹಿಸುವ ಸಾರ್ವಜನಿಕರಿಗೆ ಉಚಿತ ಚಾ ತಿಂಡಿ ವ್ಯವಸ್ಥೆಗೆ ಸೂಕುಲ್ ಅನ್ಸಾರ್ ತಟ್ಟು ಕಡವನ್ನು ಸ್ಥಳೀಯ ಯುವಕರ ತಂಡ ಕೆಲವೇ ಘಂಟೆಗಳಲ್ಲಿ ನಿರ್ಮಿಸಿದೆ.
ಕೇರಳದಲ್ಲಿ ಕಾಣಬಹುದಾದ ಬಿದಿರು, ತೆಂಗಿನ ಗರಿ, ಮುಂತಾದ ಕಚ್ಚ ವಸ್ತುಗಳಿಂದ ಯುವಕರು ಕೆಲವೇ ಸಮಯದಲ್ಲಿ ಸುಂದರ ತಟ್ಟು ಕಡೆ ನಿರ್ಮಿಸಿದ್ದು ಅದಕ್ಕೆ ವಿದ್ಯುತ್ ದೀಪಾಲಂಕಾರ ಮಾಡಿರುತ್ತಾರೆ.
ನಾಳೆ ಬೆಳಿಗ್ಗೆ 10 ಘಂಟೆಯಿಂದ ಸಂಜೆವರೆಗೆ ಇಲ್ಲಿ ಎಲ್ಲಾ ತರಹದ ತಿಂಡಿ ಪದಾರ್ಥಗಳು, ತಂಪು ಪಾನಿಯ,ಚಾ, ಕಾಫೀ ಇಲ್ಲಿ ಉಚಿತವಾಗಿ ನೀಡಲಾಗುತ್ತದೆ ಎಂದು ತಂಡದ ಮುಖ್ಯಸ್ಥರಾದ ಫೈಝಲ್ ಕಟ್ಟೆಕ್ಕಾರ್ಸ್,ರಂಶಾದ್ ಅಂಚು, ತಿಳಿಸಿದ್ದಾರೆ.
ಇದರ ನಿರ್ಮಾಣದಲ್ಲಿ ರಂ ಶದ್, ಮುನಾಫರ್ ಸೇರಿದಂತೆ 20 ಕ್ಕೂ ಹೆಚ್ಚು ಯುವಕರು ಶ್ರಮವಹಿಸಿದ್ದಾರೆ.