ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಕಾಮಗಾರಿ ಪೂರ್ಣಗೊಂಡರೂ ಬಾಕಿ ಉಳಿದಿರುವ ಇತರ ಠಾಣೆ ಮತ್ತು ವಸತಿ ಗೃಹಗಳ ಉದ್ಘಾಟನೆಗೆ ಬಹುತೇಕ ದಿನಾಂಕ ಅಂತಿಮಗೊಂಡಿದ್ದು ನ. ೩೦ ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದು ಎಸ್.ಪಿ. ಯತೀಶ್ ಎನ್. ತಿಳಿಸಿದರು.
ಅವರು ಸುಬ್ರಹ್ಮಣ್ಯ ಠಾಣೆಗೆ ಭೇಟಿ ನೀಡಿ ಮಾತನಾಡುತ್ತಾ ಕುಕ್ಕೆ ಜಾತ್ರೋತ್ಸವ ಕಾರ್ಯಕ್ರಮಗಳಿಗೆ ಬೇಕಾಗುವ ಎಲ್ಲಾ ಮಾದರಿಯ ಭದ್ರತಾ ವ್ಯವಸ್ಥೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷದಂತೆ ಸುಗಮ ಸಂಚಾರ ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಪೋಲಿಸರು ಕೈಗೊಳ್ಳಲಿದ್ದಾರೆ ಎಂದು ಹೇಳಿದರು .
ಕೆಲಸ ಪೂರ್ಣಗೊಂಡು ಆರು ತಿಂಗಳ ಬಳಿಕ ಠಾಣೆಯ ನೂತನ ಕಟ್ಟಡಕ್ಕೆ ಉದ್ಘಾಟನಾ ಭಾಗ್ಯ
ಕಳೆದ ಆರು ತಿಂಗಳುಗಳ ಹಿಂದೆಯೇ ಕೆಲಸಗಳು ಸಂಪೂರ್ಣಗೊಂಡಿದ್ದರೂ ಉದ್ಘಾಟನಾ ಭಾಗ್ಯ ಸಿಕ್ಕಿರಲಿಲ್ಲ. ಪೋಲೀಸ್ ಠಾಣೆ ಶೀಘ್ರ ಉದ್ಘಾಟನೆಯ ಅಗತ್ಯತೆಯ ಬಗ್ಗೆ ಅಮರ ಸುದ್ದಿಯು ವರದಿ ಪ್ರಕಟಿಸುತ್ತಿದ್ದಂತೆ ಎಚ್ಚೆತ್ತ ಸರಕಾರ ಉದ್ಘಾಟನೆಗೆ ಮುಹೂರ್ತ ನಿಗದಿಮಾಡಿದೆ. ಅಂತು ಷಷ್ಠಿ ಮಹೋತ್ಸವಕ್ಕೆ ಮೊದಲು ಸುಬ್ರಹ್ಮಣ್ಯ ಪೋಲಿಸರಿಗೆ ನೂತನ ಕಟ್ಟಡಕ್ಕೆ ಸ್ಥಳಾಂತರವಾಗುವ ಯೋಗ ದೊರೆಯಲಿದೆ.
ಗೃಹ ಸಚಿವರಾದ ಜಿ ಪರಮೇಶ್ವರ್ ಅವರು ಉದ್ಘಾಟನೆ ನಡೆಸಲಿದ್ದು, ಬಹುತೇಕ ಮಂಗಳೂರಿನಿಂದಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಯುವ ಸಾಧ್ಯತೆಗಳು ಇದೆ.