ಕುಕ್ಕೆ ಸುಬ್ರಹ್ಮಣ್ಯ ಸಹಿತ ಉದ್ಘಾಟನೆ ಬಾಕಿ ಉಳಿದ ಠಾಣೆ ಮತ್ತು ವಸತಿ ಗೃಹಗಳ ಉದ್ಘಾಟನೆ ಬಹುತೇಕ ದಿನಾಂಕ ಅಂತಿಮಗೊಂಡಿದ್ದು ನ. ೩೦ ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ನಡೆಸಲಿರುವರು ಎಂದು ತಿಳಿಸಿದರು. ಅವರು ಸುಬ್ರಹ್ಮಣ್ಯ ಠಾಣೆಗೆ ಭೇಟಿ ನೀಡಿ ಮಾತನಾಡುತ್ತಾ ಕುಕ್ಕೆ ಜಾತ್ರೋತ್ಸವ ಕಾರ್ಯಕ್ರಮಗಳಿಗೆ ಬೇಕಾಗುವ ಎಲ್ಲಾ ಮಾದರಿಯ ಭದ್ರತಾ ಪರಿಶೀಲನೆ ಮತ್ತು ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು ಕಳೆದ ವರ್ಷದ ಪ್ರಕಾರವೇ ಸುಗಮ ಮತ್ತು ಸುರಕ್ಷತಾ ಕ್ರಮಗಳನ್ನು ಪೋಲಿಸ್ ನಡೆಸಲಿದೆ ಎಂದು ಹೇಳಿದರು . ಕೆಲಸ ಪೂರ್ಣಗೊಂಡು ಆರು ತಿಂಗಳ ಬಳಿಕ ಉದ್ಘಾಟನಾ ಭಾಗ್ಯ . ಕಳೆದ ಆರು ತಿಂಗಳುಗಳ ಹಿಂದೆಯೇ ಕೆಲಸಗಳು ಸಂಪೂರ್ಣ ಮುಕ್ತಾಯಗೊಂಡಿದ್ದು ಅದು ಉದ್ಘಾಟನಾ ಭಾಗ್ಯಕ್ಕಾಗಿ ಕಾದು ಕುಳಿತಿದ್ದು ಇದರ ಬಗ್ಗೆ ಅಮರ ಸುದ್ದಿಯು ವರದಿ ಪ್ರಕಟಿಸುತ್ತಿದ್ದಂತೆ ಎಚ್ಚೆತ್ತು ಇದೀಗ ಸುಬ್ರಹ್ಮಣ್ಯ ಪೋಲಿಸರಿಗೆ ನೂತನ ಕಟ್ಟಡಕ್ಕೆ ಸ್ಥಳಾಂತರ ಯೋಗ ದೊರೆದಂತಾಗಿದೆ. ಗೃಹ ಸಚಿವರಾದ ಜಿ ಪರಮೇಶ್ವರ್ ಅವರು ಉದ್ಘಾಟನೆ ನಡೆಸಲಿದ್ದು ಇದು ಬಹುತೇಕ ಮಂಗಳೂರಿನಿಂದ ನಡೆಯುವ ಸಾಧ್ಯತೆಗಳು ಇವೆ ಮತ್ತು
- Wednesday
- November 27th, 2024