Ad Widget

ಸುಳ್ಯ ತಾಲೂಕು ಪಂಚಾಯತ್ ತ್ರೈಮಾಸಿಕ ಸಭೆ

ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕೆ ಹೊರತು, ಹೆಚ್ಚಿಗೆ ಚಾಚಬಾರದು ಬಾಚಿದರೆ ಅಭಿವೃದ್ಧಿ ಕೆಲಸವಾಗಲು ಸಾಧ್ಯವಿಲ್ಲ: ಶಾಸಕಿ ಭಾಗೀರಥಿ ಮುರುಳ್ಯ

. . . . . . . . .

ಸುಳ್ಯ ಅಂಬೇಡ್ಕರ್ ಭವನ ಕಾಮಗಾರಿ ಕೆಲಸಕ್ಕೆ ಎಲ್ಲಾ ಇಲಾಖೆಯವರು ಕೈಜೋಡಿಸಬೇಕು ಹಾಗೂ ಯಾವುದೇ ಅಭಿವೃದ್ಧಿ ಕೆಲಸ ಆಗದಿದ್ದರೂ ಸುಳ್ಯದ ಅಂಬೇಡ್ಕರ್ ಭವನದ ಕಾಮಗಾರಿ ಈ ಬಾರಿ ಪೂರ್ಣಗೊಳಿಸಲೇಬೇಕು. ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರು ಸುಳ್ಯ ತಾಲೂಕು ಪಂಚಾಯತ್ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.

. . . . . . .

ಅಂಬೇಡ್ಕರ್ ಭವನ ಪೂರ್ತಿಗೊಳಿಸಲು ಎಷ್ಟು ಅನುದಾನ ಬೇಕಾಗಬಹುದೆಂಬ ಸ್ಪಷ್ಟ ಮಾಹಿತಿ ಕೊಡಿ ಎಂದು ಸಮಾಜಕಲ್ಯಾಣಾಧಿಕಾರಿಗಳಿಗೆ ಕೇಳಿದಾಗ, ಅಧಿಕಾರಿಗಳು ಈಗ ೫ ಕೋಟಿ ೧೦ ಲಕ್ಷದಲ್ಲಿ ೨ ಕೋಟಿಯ ಕೆಲಸ ಆಗಿದೆ. ಉಳಿಕೆ ಅನುದಾನ ಬೇಕಾಗಿದೆ ಎಂದು ಉತ್ತರಿಸಿದರು. ಈ ಹಿಂದೆ ನಿರ್ಮಿತಿ ಕೇಂದ್ರಕ್ಕೆ ಕೆಲಸ ವಹಿಸಲಾಗಿತ್ತು. ಈಗ ಲೋಕೋಪಯೋಗಿ ಇಲಾಖೆಗೆ ವಹಿಸಲಾಗಿದೆ. ಈಗ ಅದರ ಬಗ್ಗೆ ಅವರ ಬಳಿ ಸಂಪೂರ್ಣ ವರದಿ ನೀಡಬೇಕು. ಸುಳ್ಯ ಮೀಸಲು ಕ್ಷೇತ್ರ. ಮೀಸಲು ಕ್ಷೇತ್ರದಲ್ಲೇ ಅಂಬೇಡ್ಕರ್ ಭವನ ಆಗದಿದ್ದರೆ ಇನ್ನೆಲ್ಲಿ ಆಗುವುದು. ನಾವು ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕೆ ಹೊರತು, ಹೆಚ್ಚಿಗೆ ಚಾಚಿದ್ರೆ ಹೀಗೆ ಆಗುತ್ತದೆ. ಆದ್ದರಿಂದ ನಮಗೆ ಆ ಭವನ ಈ ಬಾರಿ ಪೂರ್ತಿ ಆಗಬೇಕು. ಯಾವುದೇ ಅಭಿವೃದ್ಧಿ ಆಗದಿದ್ದರೂ ಅಂಬೇಡ್ಕರ್ ಭವನ ಮಾಡಿ ಮುಗಿಸೋಣ. ಎಲ್ಲಾ ಇಲಾಖೆಯವರು ಕೂಡಾ ನಮಗೆ ಸಹಕಾರ ನೀಡಬೇಕು. ಮುಂದೆ ಈ ಕುರಿತು ಕುಂದು ಕೊರತೆ ಸಭೆ, ತಾಲೂಕು ಪಂಚಾಯತ್ ಸಭೆಗಳಲ್ಲಿ ವಿಷಯ ಪ್ರಸ್ತಾಪ ಆಗಲು ಅವಕಾಶ ನೀಡೋದು ಬೇಡ. ಕಾಮಗಾರಿ ಮುಗಿಸಿ, ಲೋಕಾರ್ಪಣೆ ಗೊಳಿಸೋಣ ಎಂದು ಸಭೆಯಲ್ಲಿ ಹೇಳಿದರು.

ಅಡಿಕೆ ಎಲೆ ಹಳದಿ ರೋಗ ಹಾಗು ಎಲೆ ಚುಕ್ಕೆ ರೋಗ ತಾಲೂಕಿನಲ್ಲಿ ಎಷ್ಟು ವ್ಯಾಪಿಸಿದೆ ಎಂದು ಶಾಸಕರು ತೋಟಗಾರಿಕಾ ಅಧಿಕಾರಿಯನ್ನು ಪ್ರಶ್ನಿಸಿದಾಗ, ಎಲೆ ಚುಕ್ಕೆ ರೋಗ ಎಲ್ಲ ಕಡೆಯೂ ಇದೆ. ತಾಲೂಕಿನ ೧೦ ಗ್ರಾಮದಲ್ಲಿ ಅಡಿಕೆ ಎಲೆ ರೋಗ ಇದೆ ಎಂದು ಹೇಳಿದರು. ಈ ಕುರಿತು ವರದಿ ನೀಡಿ. ಸರಕಾರದ ಸಾಮೂಹಿಕವಾಗಿ ಔಷಧ ಸಿಂಪಡಣೆ ಮಾಡಿದರೆ ಅಡಿಕೆ ಎಲೆ ರೋಗ, ಎಲೆ ಚುಕ್ಕೆ ರೋಗ ಕಡಿಮೆ ಆಗಬಹುದಲ್ಲವೇ” ಎಂದು ಶಾಸಕರು ಹೇಳಿದಾಗ, “ಅಡಿಕೆ ಎಲೆ ರೋಗಕ್ಕೆ ಔಷಧ ಇಲ್ಲ. ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ಎಲೆಚುಕ್ಕೆರೋಗಕ್ಕೆ ಔಷಧ ವಿತರಣೆ ನಡೆಯುತ್ತಿದೆ ಎಂದು ತೋಟಗಾರಿಕಾ ಅಧಿಕಾರಿ ಹೇಳಿದರು. ಎಲ್ಲರಿಗೂ ಔಷಧ ಸಿಂಪಡಣೆ ಸಾಧ್ಯವಾಗೋದಿಲ್ಲ. ಶ್ರೀಮಂತರು ಔಷಧ ಸಿಂಪಡಣೆ ಮಾಡಿಕೊಳ್ಳುತ್ತಾರೆ. ಬಡವರಿಗೆ ಇದು ಸಾಧ್ಯವಾಗುವುದಿಲ್ಲ ಅದಕ್ಕಾಗಿ ಸಾಮೂಹಿಕ ಔಷಧ ಸಿಂಪಡಣೆ ಅಭಿಯಾನ ಮಾಡೋಣ ಆ ಮೂಲಕ ರೋಗ ತಡೆಗಟ್ಟಬೇಕು ಎಂದು ಹೇಳಿದರು.

ಅಡಿಕೆ ಎಲೆ ಹಳದಿ ರೋಗ ವಿಚಾರವಾಗಿ ಅಧಿವೇಶನದಲ್ಲಿ ೩ ಬಾರಿ ಪ್ರಶ್ನೆ ಕೇಳಿದರೂ ಉತ್ತರ ಬಂದಿಲ್ಲ. ಈ ಕುರಿತು ಸ್ಪಷ್ಟ ಉತ್ತರ ಸಿಗಬೇಕೆನ್ನುವ ನಿಟ್ಟಿನಲ್ಲಿ ನನಗೆ ಮತ್ತೊಮ್ಮೆ ವರದಿ ನೀಡಿ ಅಧಿವೇಶನದಲ್ಲಿ ಮಂಡಿಸುವೆ ಎಂದು ಹೇಳಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading