ಕರ್ನಾಟಕದಲ್ಲಿ 3 ಕ್ಕೆ 3 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಬಿಜೆಪಿಯ ಕೆಟ್ಟ ಟೀಕೆಯ ರಾಜಕಾರಣಿಗಳಿಗೆ ರಾಜ್ಯದ ಜನ ಉತ್ತರ ಕೊಟ್ಟಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಸಂತೋಷ ತಂದು ಕೊಟ್ಟಿದೆ,ಈ ಗೆಲುವು ರಾಜ್ಯದ ಜನತೆಯ ಅಭಿವೃದ್ದಿಗೆ ನೀಡಿದ ಗೆಲುವು ಆಗಿದೆ.
ಈ ಗೆಲುವು ಆಧಾರ ರಹಿತ ಟೀಕೆ ಟಿಪ್ಪಣಿಗಳಿ ಗೆ ಉತ್ತರ ನೀಡಿದ ಗೆಲುವು ಆಗಿದೆ,ಈ ಗೆಲುವು ರಾಜಕಿಯ ವೈಶ್ಯಮ್ಯದ ವಿರುದ್ಧದ ಗೆಲುವು ಆಗಿದು, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಶಕ್ತಿಯನ್ನು ಇಮ್ಮಡಿಗೊಳಿಸಿ ಬಿಜೆಪಿ ನಾಯಕರ ಅಹಂಕಾರಕ್ಕೆ ತಕ್ಕುದಾದ ಉತ್ತರ ನೀಡಿದ ಗೆಲುವು ಆಗಿದೆ ಎಂದು ನಗರಪಂಚಯತ್ ಸದಸ್ಯ ಹಾಗೂ ಕೆಪಿಸಿಸಿ ಯ ಮಾಜಿ ಕಾರ್ಯದರ್ಶಿ ಯಂ. ವೆಂಕಪ್ಪ ಗೌಡ ಪ್ರತಿಕ್ರಿಯಿಸಿದ್ದಾರೆ.