ಜೀವನದಿಯಲ್ಲಿ ಅಧಿಕಾರಿಗಳ ಕಣ್ಣೆದುರೇ ಅಕ್ರಮ ಮರಳು ಗಣಿಗಾರಿಕೆ , ಮಂಗಳೂರಿನಲ್ಲಿ ಲೋಕಾಯುಕ್ತ ದಾಳಿ.
ಸುಳ್ಯ: ಸುಳ್ಯ ತಾಲೂಕಿನ ಹಾಗೂ ನಗರದ ಜೀವ ನದಿ ಪಯಸ್ವಿನಿಯು ಕೇರಳ ರಾಜ್ಯಕ್ಕೆ ಹರಿಯುತ್ತಿದ್ದು ಅದಕ್ಕೆ ನಾಗಪಟ್ಟಣ ಬಳಿಯಲ್ಲಿ ಮಾಜಿ ಸಚಿವರಾದ ಎಸ್ ಅಂಗಾರರ ನೇತೃತ್ವದಲ್ಲಿ ಡ್ಯಾಂ ನಿರ್ಮಿಸಿ ಕುಡಿಯುವ ನೀರು ಪೂರೈಕೆ ಮತ್ತು ಭೂಮಿಯಲ್ಲಿ ಅಂತರ್ಜಲ ಹೆಚ್ಚಿಸುವ ಸಲುವಾಗಿ ಇದನ್ನು ನಿರ್ಮಿಸಲಾಗಿದ್ದು ಇದರ ಕೆಳಭಾಗದಲ್ಲಿ ಕಾಂತಮಂಗಲ ಬಳಿಯ ದೊಡ್ಡೇರಿ ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರ ತೋಟದಲ್ಲಿ ನದಿಗೆ ಅಕ್ರಮವಾಗಿ ರಸ್ತೆ ನಿರ್ಮಿಸಿ ಸ್ಥಳೀಯರಿಗೆ ಮರಳು ನೀಡುವುದಾಗಿ ತಿಳಿಸಿ ಇದೀಗ ಭಾರಿ ಮೊತ್ತಕ್ಕೆ ಮರಳು ಸಾಗಾಟ ಮಾಡುವುದಲ್ಲದೇ ಅಲ್ಲೆ ನೆರೆಯ ಮನೆಯ ವ್ಯಕ್ತಿಯು ಇನ್ನೊಂದು ತಂಡದ ಜೊತೆಗೆ ಒಪ್ಪಂದ ಮಾಡಿಕೊಂಡು ಮರಳು ಗಣಿಗಾರಿಕೆ ನಡೆಸಲು ಸಿದ್ದತೆ ನಡೆಸಿಕೊಂಡಿದ್ದು ಇದರ ಬೆನ್ನಲ್ಲೇ ಇಬ್ಬರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ ಇವೆಲ್ಲದರ ಮಧ್ಯೆ ಪೋಲಿಸ್ , ಕಂದಾಯ , ಗಣಿ , ಪಂಚಾಯತ್ ಎಲ್ಲರಿಗು ತಿಳಿದಿದ್ದರು ರಾಜರೋಷವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದು ಬಹಳ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಈ ಹಿಂದೆ ದೊಡ್ಡೇರಿಯ ಮಿತ್ರನ ಮನೆಗೆ ಬಂದಂತಹ ಇಬ್ಬರು ಯುವಕರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆಯು ನಡೆದಿತ್ತು ಎಂಬುವುದು ಗಮನಿಸಬೇಕಾದ ವಿಷಯವಾಗಿದೆ . ಸುಳ್ಯಕ್ಕೆ ಖಡಕ್ ಅಧಿಕಾರಿಗಳು ಬಂದಿದ್ದರು ಇವರ ಕಣ್ಣು ತಪ್ಪಿಸಿ ತೆರಳುತ್ತಿದ್ದಾರೋ ಅಥವಾ ಯಾವುದಾದರು ರಾಜಕೀಯ ವ್ಯಕ್ತಿಗಳ ಕೃಪಕಟಾಕ್ಷದಿಂದ ನಡೆಸಲಾಗುತ್ತಿದೆಯೋ ಎಂಬುವುದು ಯಕ್ಷ ಪ್ರಶ್ನೆಯಾಗಿದ್ದು ಸುಳ್ಯದಲ್ಲಿ ಪೊಲೀಸ್ , ಕಂದಾಯ ಸೇರಿದಂತೆ ಎಲ್ಲದರಲ್ಲೂ ಖಡಕ್ ಅಧಿಕಾರಿಗಳೇ ಇದ್ದರೂ ಈ ಮಾದರಿಯಲ್ಲಿ ಅಕ್ರಮ ಮಾಡಲು ಸಹಕರಿಸುವವರಾರು ಎಂಬುವುದು ಯಕ್ಷ ಪ್ರಶ್ನೆಯಾಗಿದ್ದು, ಈ ವರದಿಯ ಬಳಿಕ ಅಧಿಕಾರಿಗಳು ಕ್ರಮ ಕೈಗೊಳ್ಳುವರೇ ಇಲ್ಲ ನಿರ್ಲಕ್ಷ್ಯ ವಹಿಸಿ ಪಯಸ್ವಿನಿ ಒಡಲು ಬಗೆಯುವ ಅಕ್ರಮ ಮರಳು ಗಣಿಗಾರಿಕೆಗೆ ಸಹಾಯ ಮಾಡುತ್ತಾರೋ ಇಲ್ಲ ಸುಳ್ಯ ಜೀವನದಿ ಪಯಸ್ವಿನಿಯನ್ನು ರಕ್ಷಿಸುತ್ತಾರೋ ಎಂದುಕಾದು ನೋಡಬೇಕಿದೆ.
ಇವೆಲ್ಲದರ ಮಧ್ಯೆ ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಕೃಷ್ಣವೇಣಿ ಇವರ ಮನೆ ಮತ್ತು ಕಛೇರಿಯಲ್ಲಿ ನ.21ರ ಗುರುವಾರ ಲೋಕಾಯುಕ್ತ ದಾಳಿ ಮಾಡಿರುವುದನ್ನು ಗಮನಿಸಬೇಕಾಗಿದೆ.