Ad Widget

ದೇವಚಳ್ಳ : ಎಂ ಆರ್ ಪಿ ಎಲ್ ನಿಂದ ಕಂದ್ರಪ್ಪಾಡಿ ಶಾಲೆಯಲ್ಲಿ ನಿರ್ಮಾಣಗೊಳ್ಳುವ ಕೊಠಡಿಗೆ ಗುದ್ದಲಿಪೂಜೆ

ಶತಮಾನೋತ್ಸವ ಆಚರಿಸಿಕೊಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂದ್ರಪ್ಪಾಡಿ ಗೆ ಎಂ.ಆರ್.ಪಿ.ಎಲ್‌.ನ ವತಿಯಿಂದ ನಿರ್ಮಾಣವಾಗಲಿರುವ ರೂ.15 ಲಕ್ಷದ ಕೊಠಡಿಗೆ ಗುದ್ದಲಿಪೂಜೆಯು ನ.18ರಂದು ನಡೆಯಿತು.

. . . . . . . . .

ಸುಳ್ಯ ಶಾಸಕಿ ಕು। ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಗ್ರಾಮ ಪಂಚಾಯತ್‌ ಸದಸ್ಯರಾದ ಭವಾನಿ ಶಂಕರ ಮುಂಡೋಡಿ, ರಮೇಶ್ ಪಡ್ಡು, ಸುಲೋಚನಾ ದೇವ, ಬಿಜೆಪಿ ಮಂಡಳಿ ಅಧ್ಯಕ್ಷರಾದ ವೆಂಕಟ್ ವಳಲಂಬೆ, ದಕ್ಷಿಣ ಕನ್ನಡ ಜಿಲ್ಲೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಭರತ್‌ ಮುಂಡೋಡಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಕೇಶ್‌ ರಾಜ್ ಹಿರಿಯಡ್ಕ, ದೇವಚಳ್ಳ ಯುವಕ ಅಧ್ಯಕ್ಷ ಉದಯಕುಮಾ‌ರ್ ಮುಂಡೋಡಿ, ಪ್ರಮುಖರಾದ ದಿವಾಕರ ಮುಂಡೋಡಿ, ವಿನೋದ್ ಕುಮಾರ್ ಮುಂಡೋಡಿ, ವಿನಯಕುಮಾರ್ ಮುಳುಗಾಡು, ಯಶೋಧ ಬಾಳೆಗುಡ್ಡೆ, ವಿಜೇಶ್ ಹಿರಿಯಡ್ಕ, ಚಂದ್ರಶೇಖರ ಕಂದ್ರಪ್ಪಾಡಿ, ಲಿಂಗಪ್ಪ ಗೌಡ ಚಿತ್ತಡ್ಕ, ಪ್ರೀತಮ್ ಮುಂಡೋಡಿ, ಹಿರಿಯ ವಿದ್ಯಾರ್ಥಿಗಳು, ಗ್ರಾಮಸ್ಥರು, ಕಟ್ಟಡ ಕಾಂಟ್ರೆಕ್ಟ್ ರಾದ ಜನಾರ್ದನ ಕುತ್ಯಾಳ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ವೀಣಾ ಕುಮಾರಿ ಎಂ ವಿ, ಶಾಲಾ ಅಧ್ಯಾಪಕ ವೃಂದದವರು ಅಕ್ಷರ ದಾಸೋಹ ಸಿಬ್ಬಂದಿಗಳು, ಪೋಷಕರು, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ವಾಣಿ ಕೆ ಎಸ್ ಸ್ವಾಗತಿಸಿದರು, ಪದವೀಧರ ಪ್ರಾಥಮಿಕ ಶಿಕ್ಷಕರಾದ ಅಜಯ ಕೆ ಎಂ ಕಾರ್ಯಕ್ರಮ ನಿರೂಪಣೆ ಹಾಗೂ ವಂದನಾರ್ಪಣೆ ಗೈದರು .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading