ಅನಾರೋಗ್ಯದ ಹಿನ್ನೆಲೆಯಲ್ಲಿದ್ದ ವ್ಯಕ್ತಿಯೋರ್ವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅರಂತೋಡು ಗ್ರಾಮದ ಉಳುವಾರಿನಲ್ಲಿ ನ.19ರಂದು ಸಂಜೆ ಸಂಭವಿಸಿದೆ.ಅರಂತೋಡು ಗ್ರಾಮದ ಉಳುವಾರಿನ ಪುಟ್ಟಣ್ಣ ಅವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಅವರಿಗೆ 63 ವರ್ಷ ವಯಸ್ಸಾಗಿತ್ತು. ಪುಟ್ಟಣ್ಣ ಅವರು ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆಂದು ತಿಳಿದುಬಂದಿದೆ. ಮೃತರ ಪತ್ನಿ ಈ ಹಿಂದೆ ನಿಧನರಾಗಿದ್ದು, ಪುತ್ರ ಶರತ್, ಪುತ್ರಿ ರಮ್ಯ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.
- Tuesday
- December 3rd, 2024