Ad Widget

ನ. 24-25 : ಪೈಚಾರ್ ಅಲ್ ಅಮೀನ್ ಯೂತ್ ಸೆಂಟ‌ರ್ ವತಿಯಿಂದ ಸ್ವಲಾತ್‌ ವಾರ್ಷಿಕ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಹಾಗೂ ಕಛೇರಿ ಉದ್ಘಾಟನೆ

. . . . .

ಪೈಚಾರು ಅಲ್ ಅಮೀನ್ ಯೂತ್ ಸೆಂಟರ್ ವತಿಯಿಂದ 18 ನೇ ವಾರ್ಷಿಕ ಸ್ವಲಾತ್ ವಾರ್ಷಿಕ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಹಾಗೂ ಯೂತ್ ಸೆಂಟರ್‌ನ ನೂತನ ಕಛೇರಿ ಉದ್ಘಾಟನೆ ನ.24 ಮತ್ತು 25 ರಂದು ಪೈಚಾರ್ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಅಲ್ ಅಮೀನ್ ಯೂತ್ ಸೆಂಟರ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.

ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಲ್ ಅಮೀನ್ ಯೂತ್ ಸೆಂಟರ್‌ನ ಅಧ್ಯಕ್ಷ ಅಬ್ದುಲ್ ಸತ್ತಾರ್ ಪೈಚಾರ್’ ನ.24ರಂದು ಸಂಜೆ 4.30ಕ್ಕೆ ಮೊಗರ್ಪಣೆ ಮಸೀದಿ ವಠಾರದಿಂದ ಪೈಚಾರ್ ತನಕ ಆಕರ್ಷಕ ಮೆರವಣಿಗೆ ನಡೆಯಲಿದ್ದು ಮೆರವಣಿಗೆಯಲ್ಲಿ ಸ್ಥಳೀಯ 8 ತಂಡಗಳಿಂದ
ದಫ್ ಪ್ರದರ್ಶನ ನಡೆಯಲಿದೆ.

ಸಂಜೆ 5ಕ್ಕೆ ಅಲ್ ಅಮೀನ್ ಯೂತ್ ಸೆಂಟರ್‌ನ ನೂತನ ಕಚೇರಿಯ ಉದ್ಘಾಟನೆ ನಡೆಯಲಿದೆ. ಬಳಿಕ ಸಂಜೆ 7 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಮಂಜೇಶ್ವರಂ ಶಾಸಕರಾದ ಎ.ಕೆ.ಎಂ ಅಶ್ರಫ್, ಜಿ.ಪಂ. ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಸೇರಿದಂತೆ ಧಾರ್ಮಿಕ, ಸಾಮಾಜಿಕ,ರಾಜಕೀಯ ಕ್ಷೇತ್ರದ ಮುಖಂಡರು ಭಾಗವಹಿಸಲಿದ್ದಾರೆ.

ರಾತ್ರಿ 9 ರಿಂದ ರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದ್ದು ರಾಜ್ಯದ ಪ್ರಮುಖ12 ದಫ್ ತಂಡಗಳು ಭಾಗವಹಿಸಲಿದೆ. ಸ್ಪರ್ಧೆಯಲ್ಲಿ ವಿಜೇತರಾದ ತಂಡಕ್ಕೆ ಪ್ರಥಮ ಬಹುಮಾನ 13,000, ದ್ವಿತೀಯ 10,000, ತೃತೀಯ 7,000 ನಗದು ಬಹುಮಾನ ನೀಡಲಾಗುವುದು ಎಂದು ಅವರು ವಿವರಿಸಿದರು.

ಪೈಚಾರು ಕಾರುಣ್ಯ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಆರ್.ಬಿ.ಬಶೀ‌ರ್ ಮಾತನಾಡಿ ಅಲ್ ಅಮೀನ್ ಯೂತ್ ಸೆಂಟರ್ ಕಳೆದ 18 ವರ್ಷಗಳಿಂದ ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಕೋವಿಡ್ ಹಲವು ಸಹಾಯ ಹಸ್ತಗಳನ್ನು ನೀಡಲಾಗಿದ್ದು ಸುಮಾರು 5 ಲಕ್ಷಕ್ಕೂ ಅಧಿಕ ಆಹಾರ ಸಮಾಗ್ರಿಗಳ ಸಹಾಯವನ್ನು ವಿತರಿಸಲಾಗಿತ್ತು. ಎರಡು ದಶಕಗಳಿಂದ ಹಲವು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನ ಮಾನಸದಲ್ಲಿ ನೆಲೆಯಾಗಿದೆ. ಇದೀಗ ಪ್ರಥಮ ಬಾರಿಗೆ ರಾಜ್ಯಮಟ್ಟದ ದಫ್ ಸ್ಪರ್ಧೆಯನ್ನು ಏರ್ಪಡಿಸಲಾಗುತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಲ್ ಅಮೀನ್ ಯೂತ್ ಸೆಂಟರ್‌ನ ಉಪಾಧ್ಯಕ್ಷ ಹನೀಫ್ ಆಲ್ಫಾ, ಪ್ರಧಾನ ಕಾರ್ಯದರ್ಶಿ ಅಬೂಸಾಲಿ, ಸದಸ್ಯರಾದ ಮುಜೀಬ್ ಪೈಚಾರ್, ಸದಸ್ಯರಾದ ಕರೀಂ ಕೆ.ಎಂ.ಉಪಸ್ಥಿತರಿದ್ದರು.

ನ.25ರಂದು ಸಂಜೆ 7ರಿಂದ ಸಯ್ಯದ್ ಜಸೀಲ್ ಶಾಮಿಲ್ ಇರ್ಫಾನಿ ತಂಗಳ್ ಕೋಲಪ್ಪುರಂ ಕೇರಳ ಅವರ ನೇತೃತ್ವದಲ್ಲಿ ವಾರ್ಷಿಕ ಸ್ವಲಾತ್ ಕಾರ್ಯಕ್ರಮ ನಡೆಯಲಿದೆ. ಪೈಚಾರ್ ಬಿ ಜೆ ಎಂ ಖತೀಬರಾದ ಶಮೀರ್ ಅಹ್ಮದ್ ನಈಮಿ ಮುಖ್ಯ ಪ್ರಭಾಷಣ ಮಾಡುವರು ಎಂದು ಅಬ್ದುಲ್ ಸತ್ತಾ‌ರ್ ವಿವರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!