ಸುಳ್ಯ: ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆ ಅವಧಿ ಪೂರ್ಣ ಗೊಂಡಿದ್ದು ಚುನಾವಣೆ ಹಿನ್ನೆಲೆಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವಿಳಂಬಗೊಂಡಿತ್ತು. ಇದೀಗ ಅಧ್ಯಕ್ಷ ಗಾದಿಗೆ ಫೈಟ್ ಆರಂಭವಾಗಿದ್ದು ಇದರಲ್ಲಿ ಹಲವರು ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೂಡ ಮುಗಿಸಿದ್ದಾರೆ. ಆದರೆ ಇವರಲ್ಲಿ ಓರ್ವರು ಈ ಹಿಂದೆ ಅಧ್ಯಕ್ಷರಾಗಿ ಅನುಭವವಿದ್ದು, ಇನ್ನುಳಿದವರು ಪಕ್ಷದ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿದವರಾಗಿದ್ದಾರೆ. ಇದರಲ್ಲಿ ಪ್ರಮುಖವಾಗಿ ಪ್ರಸ್ತುತ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ ಎಸ್ ಗಂಗಾಧರ್ ಹೆಸರು ಮುಂಚೂಣಿಯಲ್ಲಿದೆ, ಇನ್ನುಳಿದಂತೆ ಮಾಜಿ ಬ್ಲಾಕ್ ಅಧ್ಯಕ್ಷರು ಹಾಗೂ ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪ ಗೌಡ, ಮಹಿಳಾ ಕೋಟದಡಿಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಸರಸ್ವತಿ ಕಾಮತ್, ಯುವ ನ್ಯಾಯವಾದಿ ಗ್ರಾ.ಪಂ ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ರಾಧಾಕೃಷ್ಣ ಬೊಳ್ಳೂರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ರಾಜ್ಯ ಹಾಗೂ ಜಿಲ್ಲಾ ನಾಯಕರ ಬಳಿಗೆ ತೆರಳಿ ತಮ್ಮ ತಮ್ಮನ್ನು ಆಯ್ಕೆ ಮಾಡುವಂತೆ ವಿನಂತಿಸುತ್ತಿದ್ದು ಜಿಲ್ಲೆಯ ಪ್ರಮುಖ ನಾಯಕರು ಮತ್ತು ರಾಜ್ಯ ನಾಯಕರು ಅಂತಿಮವಾಗಿ ಯಾರ ಹೆಸರು ಆಯ್ಕೆ ಮಾಡಬಹುದು ಎಂಬುವುದು ಕಾದು ನೋಡಬೇಕಿದೆ.
- Friday
- November 22nd, 2024