ಗುಂಡ್ಯ: ಗುಂಡ್ಯದಲ್ಲಿ ನಡೆಯುತ್ತಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆಗೆ ಪುತ್ತೂರು ಎಸಿ ಆಗಮಿಸಿದ ಬಳಿಕ ಪ್ರತಿಭಟನಾ ಕಾರರ ಮನವಿ ಸ್ವೀಕರಿಸಿ ಈ ಪ್ರತಿಭಟನೆಯ ಮಾಹಿತಿಯನ್ನು ಸರಕಾರಕ್ಕೆ ಇಂದು ಸಂಜೆಯ ಒಳಗೆ ತಲುಪಿಸಿ ಮಾಧ್ಯಮದ ಮೂಲಕ ಪ್ರತಿಭಟನಾ ನಿರತರಿಗೆ ತಿಳಿಸುವುದು ಮತ್ತು ನಮಗೂ ಸರಕಾರದ ನಾನಾ ಕೆಲಸಗಳು ಇರುವ ಹಿನ್ನಲೆಯಲ್ಲಿ ತಡವಾಯಿತು ಅದಿಕ್ಕಾಗಿ ಪ್ರತಿಭಟನಾ ನಿರತರ ಕ್ಷಮೆ ಯಾಚಿಸುವುದಾಗಿ ಹೇಳಿದರು. ಬಳಿಕ ಗುರುರಾಜ್ ಗಂಟಿಹೊಳೆ ಸರ್ವರನ್ನು ವಂದಿಸಿ ಮುಂದಿನ ಹೋರಾಟದ ಬಗ್ಗೆ ತಿಳಿಸಿದರು ಅಲ್ಲದೇ ಕಿಶೋರ್ ಶಿರಾಡಿ ಮಾತನಾಡಿ ಜನವರಿ 15 ರ ಒಳಗೆ ಜಂಟಿ ಸರ್ವೆ ಮೂಲಕ ಗಡಿ ಗುರುತು ಪಡಿಸಬೇಕು ಇಲ್ಲವಾಗಿದ್ದಲ್ಲಿ ಇದಕ್ಕಿಂತ ಹೆಚ್ಚಿನ ಜನರೊಂದಿಗೆ ರಸ್ತೆ ತಡೆ ನಡೆಸುವುದಾಗಿ ತಿಳಿದಿದರು.
- Friday
- November 15th, 2024