ಕಾರ್ಮಿಕ ಇಲಾಖೆಯ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಕೊಡಲ್ಪಡುವ ಕಿಟ್ ಗಳನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ವಿತರಿಸಿದರು. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮೇಸ್ತ್ರಿ ಕಿಟ್, ಪ್ಲಂಬಿಂಗ್ ಕಿಟ್, ಎಲೆಕ್ಟ್ರಿಷಿಯನ್ ಕಿಟ್ ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ತಾ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ , ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಸ್ ಎನ್ ಮನ್ಮಥ , ಪ್ರಮುಖರಾದ ಸುಭೋದ್ ಶೆಟ್ಟಿ ಮೇನಾಲ , ರಾಕೇಶ್ ರೈ ಕೆಡೆಂಜಿ , ಹರೀಶ್ ಕಂಜಿಪಿಲಿ , ಸುನಿಲ್ ಕೇರ್ಪಳ್ಳ , ಅಶೋಕ್ ಅಡ್ಕಾರ್ , ಮಹೇಶ್ ರೈ ಮೇನಾಲ ಸೇರಿದಂತೆ ಫಲಾನುಭವಿಗಳು ಮತ್ತು ಮತ್ತಿತರರು ಹಾಜರಿದ್ದರು.
- Tuesday
- December 3rd, 2024