ದುಬೈಯಲ್ಲಿ ಅನಿವಾಸಿ ಭಾರತೀಯ ಅರಂತೋಡು ಕುಟುಂಬ ಸಮ್ಮಿಲನ ಮತ್ತು ಸನ್ಮಾನ ಸಮಾರಂಭದ ಕಾರ್ಯಕ್ರಮ, ನ. 07ರಂದು ಅಲ್ ತವಾರ್ ಪಾರ್ಕ್ ದುಬೈ ಯಲ್ಲಿ ವಿಜೃಂಭಣೆಯಿಂದ ನೆರವೇರಿತು. ಸಮ್ಮಿಲನದ ಮುಖ್ಯ ಆಕರ್ಷಣೆಯಾಗಿ ಅಲ್ಪ ದಿವಸದ ಮಾಯಾ ನಗರಿ ದುಬೈ ಯ ವೀಕ್ಷಣೆಗೆ ಬಂದಿದ್ದ ಅರಂತೋಡು ಪಾರೆಕ್ಕಲ್ ಕಮಾಲ್,ಮತ್ತು ಯುವ ಉದ್ಯಮಿ, ಸಮಾಜ ಸೇವಕ ಡಾ. ಇಸ್ಮಾಯಿಲ್ ಸರ್ಫ್ರಾಜ್ ಅವರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಯಿತು. ಇವರ ಅನುಭವ ಮತ್ತು ತ್ಯಾಗಕ್ಕೆ ಗೌರವ ಸೂಚಿಸಲಾಯಿತು.ಅರಂತೋಡು ದುಬೈ ಜಮಾತ್ ನ ಅಧ್ಯಕ್ಷರಾದ ಮುಕ್ತಾರ್ ಪಟೇಲ್ ಹಾಗೂ ಅರಂತೋಡು ಕಮಿಟಿಯ ನಿರ್ದೇಶಕರಾದ ಸರ್ಫರಾಜ್ ನವಾಜ್ ರವರು ಯುವ ಉದ್ಯಮಿ ಡಾ. ಇಸ್ಮಾಯಿಲ್ ಸರ್ಫರಾಜ್ ಅವರನ್ನು ಶಾಲು ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಿದರು, ಕುಟುಂಬ ಸದಸ್ಯರು ಹಾಗೂ ಸೌದಿ ಸಮಿತಿಯ ಸದಸ್ಯರಾದ ಕಮಾಲ್ ಪಾರೆಕ್ಕಲ್ ಅವರನ್ನು ಅರಂತೋಡು ದುಬೈ ಸಮಿತಿಯ ಸದಸ್ಯರಾದ ರಿಪಾಯಿ ಪಟೇಲ್ ಹಾಗೂ ಅಶ್ರಫ್ ಆದೂರ್ ಅವರು ಶಾಲು ಮತ್ತು ಸ್ಮರಣ ಚಿಹ್ನೆಯನ್ನು ನೀಡಿ ಸನ್ಮಾನಿಸಿದರು.ಅದೇ ರೀತಿ ಕಮಾಲ್ ಪಾರೆಕ್ಕಲ್ ಅವರ ಮಾವ ಜನಾಬ್ ಅಬ್ದುಲ್ ರಹಿಮಾನ್ ಅತೂರ್ ಅವರನ್ನು ನಾಸಿರ್ ಪಟೇಲ್ ಹಾಗೂ ಸೈಫುದ್ದೀನ್ ಪಟೇಲ್ ಅವರು ಶಾಲು ಮತ್ತು ಸ್ಮರಣ ಚಿಹ್ನೆಯನ್ನು ನೀಡಿ ಸನ್ಮಾನಿಸಿದರು.ಮುಕ್ತಾರ್ ಪಟೇಲ್ ಅವರು ಕಮಾಲ್ ಪಾರೆಕ್ಕಲ್ ಅವರ ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಮತ್ತು ಅರಂತೋಡು ಊರಿನಲ್ಲಿ ಕಮಾಲ್ ಪಾರೆಕ್ಕಲ್ ರವರ ಉಪಸ್ಥಿತಿ ಮತ್ತು ಜನರೊಡನೆ ಅವರ ಬಾಂಧವ್ಯದ ಕ್ಷಣಗಳನ್ನು ಸ್ಮರಿಸಿದರು ಮತ್ತು , ಯುವ ಪೀಳಿಗೆಗೆ ಹಳೆಯ ದಿನಗಳ ಜೀವನ ಶೈಲಿಯ ಬಗ್ಗೆ ಅವರಲ್ಲಿರುವ ಕಾಳಜಿಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.ಕಾರ್ಯಕ್ರಮವನ್ನು ಅರಂತೋಡು ಜಮಾತ್ ಸದಸ್ಯರಾದ ಜನಾಬ್ ಸಮೀರ್ ಕಲ್ಲಾರೆ ನಿರೂಪಿಸಿದರು.
- Friday
- November 8th, 2024